ಹಾಸನ:ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಕುಡಿದು ತಮ್ಮನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಬೈದು ಚಳಿ ಬಿಡಿಸಿದ್ದಾರೆ.
ಮನವಿ ಕೊಡಲು ಕುಡಿದು ಬಂದಿದ್ದ ವ್ಯಕ್ತಿಗೆ ಬೆವರಿಳಿಸಿದ ಶಾಸಕ: ಹಿಗ್ಗಾ ಮುಗ್ಗ ಬೈಗುಳ - Arakalagudu JDS MLA Warning to the drunk Person
ಎಂ.ಎಸ್.ಐ.ಎಲ್ ವಿಚಾರವಾಗಿ ಶಾಸಕರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲು ಮುಂದಾದ ವೇಳೆ, ಮದ್ಯಪಾನ ಮಾಡಿದ್ದ ವ್ಯಕ್ತಿಯೋರ್ವ ಎಂ.ಎಸ್.ಐ.ಎಲ್ ಮಾಡಿಸಿಯೇ ಕೊಡಬೇಕು ಎಂದು ಶಾಸಕರಿಗೆ ಆಗ್ರಹ ಮಾಡಿದ್ದೆ ತಡ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಅದೆಲ್ಲಿತ್ತೋ ಕೋಪ, ಹಿಗ್ಗಾ ಮುಗ್ಗಾ ಬೈದಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿದ ಕಬ್ಬಳಿಗೆರೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ. ಗ್ರಾಮಸ್ಥನೋರ್ವನಿಗೆ ಅಚಾಚ್ಯ ಶಬ್ದಗಳಿಂದ ಬೈದು ಬೆದರಿಸಿದ್ದಾರೆ. ಅರಕಲಗೂಡು ತಾಲೂಕಿನ ಬೆಳವಾಡಿಯಲ್ಲಿ ಎಂ.ಎಸ್.ಐ.ಎಲ್ ತೆರೆಯಬೇಕೆಂದು ಈ ಹಿಂದೆಯೂ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ, ಗ್ರಾಮದ ಸುತ್ತಮುತ್ತಲಿನ ಸ್ತ್ರೀ ಶಕ್ತಿ ಸಂಘಗಳು ಮತ್ತು ಬೆಳವಾಡಿ ಮಹಿಳೆಯರು ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು. ಇದರ ನಡುವೆ ಇವತ್ತು ಕೆಲವು ಗ್ರಾಮಸ್ಥರು ಶಾಸಕರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಎಂ.ಎಸ್.ಐ.ಎಲ್ ವಿಚಾರವಾಗಿ ಶಾಸಕರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲು ಮುಂದಾದ ವೇಳೆ, ಮದ್ಯಪಾನ ಮಾಡಿದ್ದ ವ್ಯಕ್ತಿಯೋರ್ವ ಎಂ.ಎಸ್.ಐ.ಎಲ್ ಮಾಡಿಸಿಯೇ ಕೊಡಬೇಕು ಎಂದು ಶಾಸಕರಿಗೆ ಆಗ್ರಹ ಮಾಡಿದ್ದೆ ತಡ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಅದೆಲ್ಲಿತ್ತೋ ಕೋಪ, ಹಿಗ್ಗಾ ಮುಗ್ಗಾ ಬೈದಿದ್ದಾರೆ.
TAGGED:
Arakalagudu JDS MLA