ಕರ್ನಾಟಕ

karnataka

ಅರಕಲಗೂಡಿನಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು

By

Published : Jul 1, 2020, 9:09 AM IST

ಹೊನ್ನವಳ್ಳಿ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಹೊಂದಿಕೊಂಡಿರುವ ಸ.ನಂ 47ರ ಭೂಮಿಯನ್ನು ಖಾಸಗಿಯವರು ಅರಣ್ಯ ಒತ್ತುವರಿ ಮಾಡಿದ್ದರು. ಈ ಸಂಬಂಧ ನೋಟಿಸ್ ನೀಡಿದ ಬಳಿಕ ಈ ಭೂಮಿ ಅರಣ್ಯ ಇಲಾಖೆಯದು ಎಂದು ತಿಳಿದು ಬಂದಿತ್ತು. ಇದರಿಂದಾಗಿ ಸ್ವಯಂಪ್ರೇರಿತರಾಗಿ ಜಾಗ ಬಿಟ್ಟುಕೊಡಲು ಒತ್ತುವರಿದಾರರು ಮುಂದಾಗಿದ್ದಾರೆ.

Forest land clearance
ಅರಕಲಗೂಡು: ಅರಣ್ಯ ಭೂಮಿ ಒತ್ತುವರಿ ತೆರವು

ಅರಕಲಗೂಡು:ತಾಲೂಕಿನ ಹೊನ್ನವಳ್ಳಿ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಹೊಂದಿಕೊಂಡಿರುವ ಸ.ನಂ 47ರ ಭೂಮಿಯನ್ನು ಖಾಸಗಿಯವರು ಅರಣ್ಯ ಒತ್ತುವರಿ ಮಾಡಿದ್ದರು. ಇವರನ್ನು ಮನವೊಲಿಸಿ 4 ಎಕರೆ ಭೂಮಿಯನ್ನು ಮಂಗಳವಾರ ತೆರವುಗೊಳಿಸಲಾಯಿತು.

ವಲಯ ಅರಣ್ಯಾಧಿಕಾರಿ ಅರುಣ್

ಸರ್ವೆ ನಂ. 47 ರಲ್ಲಿ ಸುಮಾರು 4 ಎಕರೆ ಒತ್ತುವರಿ ಮಾಡಲಾಗಿತ್ತು. ಈ ಜಮೀನಿನ ಬೆಲೆ ಈಗ ಎಕರೆಗೆ ಅಂದಾಜು 50 ಲಕ್ಷ ರೂ. ಇದೆ. ಒಟ್ಟು 2 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ ಎಂದು ಅಂದಾಜಿಸಲಾಗಿದೆ. ಈ ಜಾಗದಲ್ಲಿ ಖಾಸಗಿಯವರು ಬೇಸಾಯ ಮಾಡಿಕೊಂಡಿದ್ದರು. ಈ ಸಂಬಂಧ ನೋಟಿಸ್​​​ ನೀಡಲಾಗಿತ್ತು. ಇದು ಅರಣ್ಯ ಇಲಾಖೆಯದು ಎಂದು ತಿಳಿದು ಬಂದ ಮೇಲೆ ಸ್ವಯಂ ಪ್ರೇರಿತರಾಗಿ ಜಾಗ ಬಿಟ್ಟುಕೊಡಲು ಒತ್ತುವರಿದಾರರು ಮುಂದಾದರು. ನಂತರ ಆ ಜಾಗದಲ್ಲಿ ಗುಂಡಿ ತೆಗೆದು ಮಿಶ್ರಜಾತಿಯ ಗಿಡಗಳನ್ನು ನೆಡಲಾಗಿದೆ.

ಸಾಮಾನ್ಯ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿ ನಾರಾಯಣ, ಗುರುಸ್ವಾಮಿ, ರಘು ಮತ್ತು ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ಅರುಣ್ ತಿಳಿಸಿದ್ದಾರೆ.

ABOUT THE AUTHOR

...view details