ಅರಕಲಗೂಡು : ತಾಲೂಕಿನಲ್ಲಿ ಭಾನುವಾರ 23 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ಠಾಣೆ ಸೇರಿ ಹಲವು ಗ್ರಾಮ ಮತ್ತು ವಾರ್ಡ್ಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಾಲೂಕು ಆಡಳಿತಾಧಿಕಾರಿ ತಿಳಿಸಿದ್ದಾರೆ.
ಅರಕಲಗೂಡು ತಾಲೂಕಿನಲ್ಲಿ ಭಾನುವಾರ 23 ಹೊಸ ಕೊರೊನಾ ಪ್ರಕರಣ ಪತ್ತೆ - Arakalagudu Covid update
ಹಾಸನದ ಅರಕಲಗೂಡು ತಾಲೂಕಿನಲ್ಲಿ ಭಾನುವಾರ 23 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಅರಕಲಗೂಡಿನ ಗ್ರಾಮ , ವಾರ್ಡ್ ಸೀಲ್ ಡೌನ್
ಭಾನುವಾರ ತಾಲೂಕಿನ ಕೇರಳಾಪುರ ಗ್ರಾಮದ ಇಬ್ಬರು, ಮಲ್ಲಿಪಟ್ಟಣ ಗ್ರಾಮದ ಮೂವರು, ಹೆತ್ತಗೌಡನಹಳ್ಳಿಯ ಓರ್ವ, ಬೆಳವಾಡಿ ಗ್ರಾಮದ ಇಬ್ಬರು, ಕಟ್ಟೇಪುರ ಗ್ರಾಮದ ಐವರು, ಬನ್ನೂರು ಗ್ರಾಮದ ಓರ್ವ ಹಾಗೂ ಅರಕಲಗೂಡು ಪಟ್ಟಣದ ಹತ್ತು ಮಂದಿ ಸೇರಿ ಒಟ್ಟು 23 ಜನರಿಗೆ ಸೋಂಕು ದೃಢಪಟ್ಟಿದೆ.
ಪಟ್ಟಣದ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.