ಕರ್ನಾಟಕ

karnataka

ETV Bharat / state

ಏಪ್ರಿಲ್ ಮಾಸಿಕ ಬಸ್ ಪಾಸ್‌ಗಳನ್ನೇ ಮೇ ತಿಂಗಳಲ್ಲಿ ಉಚಿತವಾಗಿ ಬಳಸಲು ಬಿಎಂಟಿಸಿ ಅವಕಾಶ - ಬಿಎಂಟಿಸಿ ಆದೇಶ

ಅಗತ್ಯ ಸೇವೆ ಹಾಗೂ ಇತರ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾತ್ರ ಅಗತ್ಯ ಹಾಗೂ ಆರೋಗ್ಯ ಸೇವೆಗಳ 165 ಸಾರಿಗೆ ಬಸ್​ಗಳನ್ನು ಓಡಿಸಲಾಗ್ತಿದೆ. ಏಪ್ರಿಲ್ ಮಾಸಿಕ ಬಸ್ ಪಾಸ್‌ಗಳನ್ನೇ ಮೇ ತಿಂಗಳಲ್ಲಿ ಉಚಿತವಾಗಿ ಬಳಸಲು ಪ್ರಯಾಣಿಕರಿಗೆ ಬಿಎಂಟಿಸಿ ಅವಕಾಶ ನೀಡಿದೆ.

bmtc
bmtc

By

Published : May 13, 2021, 11:02 PM IST

ಬೆಂಗಳೂರು: ಏಪ್ರಿಲ್ ತಿಂಗಳ ಮಾಸಿಕ ಪಾಸ್​ಗಳನ್ನೇ ಬಳಸಿ ಮೇ ತಿಂಗಳ 31 ರವರೆಗೂ ಉಚಿತವಾಗಿ ಪ್ರಯಾಣಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.

ಅಗತ್ಯ ಸೇವೆ ಹಾಗೂ ಇತರ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾತ್ರ ಅಗತ್ಯ ಹಾಗೂ ಆರೋಗ್ಯ ಸೇವೆಗಳ 165 ಸಾರಿಗೆ ಬಸ್​ಗಳನ್ನು ಓಡಿಸಲಾಗ್ತಿದೆ.

ಬಿಎಂಟಿಸಿ ಆದೇಶ
ಈ ಪಾಸ್ ಉಚಿತವಾಗಿ ಬಳಸಲು ಅವಕಾಶ ಇರುವವರು..
1) ಸರ್ಕಾರಿ, ಅರೆ ಸರ್ಕಾರಿ ನೌಕರ, ಅಧಿಕಾರಿ ಸಿಬ್ಬಂದಿ, ಆಸ್ಪತ್ರೆಗಳ ನರ್ಸ್, ವೈದ್ಯರು, ವೈದ್ಯಕೀಯ ತಂತ್ರಜ್ಞರು, ಪ್ರಯೋಗಾಲಯದ ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು
2) ಆರೋಗ್ಯ, ಪೊಲೀಸ್, ಗೃಹ ರಕ್ಷಕ ದಳ, ಅಗ್ನಿ ಶಾಮಕ, ತುರ್ತು ಸೇವೆಗಳ ಸಿಬ್ಬಂದಿ
3) ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂ ಎಸ್ ಎಸ್ ಬಿ ಸಿಬ್ಬಂದಿ

ABOUT THE AUTHOR

...view details