ಕರ್ನಾಟಕ

karnataka

ETV Bharat / state

ಶೋಷಿತ ಜನಾಂಗ, ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಮನವಿ - Appeal for justice Madiga community

ಕಳೆದ 20 ವರ್ಷದ ಹೋರಾಟದಲ್ಲಿ ಅನೇಕ ಪಕ್ಷದ ಮುಖಂಡರು ಉದಾ:- ಕಾಂಗ್ರೆಸ್, ಬಿಜೆಪಿ, ಜನತಾದಳ ಇನ್ನೂ ಅನೇಕ ಪಕ್ಷಗಳೂ ಹಾಗೂ ಸಂಘಟನೆಗಳಿಂದ ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ. ಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡುತ್ತಾರೆಂದು ಹೇಳಿ ಅವರ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ ಇಲ್ಲಿಯವರೆಗೆ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Appeal for justice Madiga community
ಶೋಷಿತ ಜನಾಂಗ, ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಮನವಿ

By

Published : Sep 3, 2020, 4:30 PM IST

Updated : Sep 3, 2020, 4:47 PM IST

ಹಾಸನ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟು ಶೋಷಿತ ಜನಾಂಗಕ್ಕೆ ಸೇರಿದ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಡಾ. ಬಾಬುಜಗಜೀವನ್ ರಾಮ್ ಮಾದಿಗ ಮಹಾಸಭಾ ವೇದಿಕೆಯ ಅಧ್ಯಕ್ಷ ಹೆಚ್.ಪಿ. ಶಂಕರರಾಜು ಮನವಿ ಮಾಡಿದರು.

ಶೋಷಿತ ಜನಾಂಗ, ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಮನವಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯಾವಾರು ಒಳ ಮೀಸಲಾತಿಗೆ ಸಂಬಂಧಪಟ್ಟ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್‌ಕುಮಾರ್ ಮಿಶ್ರರವರನ್ನು ಒಳಗೊಂಡ ಪಂಚ ನ್ಯಾಯಾಧೀಶರ ಪೀಠವು, ಸಮಾನತೆ ತರುವುದಕ್ಕಾಗಿ ಎಲ್ಲರೂ ಮೀಸಲಾತಿ ನೀಡಲು ಒಳ ವರ್ಗಿಕರಣವನ್ನು ಮಾಡಲು ಅವಕಾಶ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿರುತ್ತದೆ. ಇದನ್ನು ಮಾದಿಗ ಸಮುದಾಯದ ಒಂದು ಆಶಾಕಿರಣ ಎಂದು ಭಾವಿಸುತ್ತದೆ ಎಂದರು.

ಇದರಂತೆ ಆಂಧ್ರಪ್ರದೇಶದಲ್ಲಿ ಮಾದಿಗ ಸಮುದಾಯದವರು 30 ವರ್ಷ ಹೋರಾಟ ಮಾಡಿದ್ದಕ್ಕೆ ಅಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾದಿಗರಿಗೆ ಒಳಮೀಸಲಾತಿ ಕಲ್ಪಿಸಿದ್ದಾರೆ. ಕಳೆದ 20 ವರ್ಷಗಳಿಂದ ಕರ್ನಾಟಕದಲ್ಲಿ ಮಾದಿಗ ಸಮುದಾಯದವರು ಒಳಮೀಸಲಾತಿ ವರ್ಗೀಕರಣಕ್ಕೆ ಹೋರಾಟ ಮಾಡಿಕೊಂಡು ಬಂದ ಫಲವಾಗಿ ಅಂದಿನ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ರಚನೆ ಮಾಡಿತು. ರಚನೆ ಮಾಡಿ ಈ ಆಯೋಗದ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ವರದಿ ತಯಾರು ಮಾಡಿದೆ. ಈ ವರದಿ ಸರ್ಕಾರಕ್ಕೆ ಕೊಡುವುದಕ್ಕೆ ಮುಂಚೆ ಅನೇಕ ಪರಿಶಿಷ್ಟ ಜಾತಿ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಾರೆ.

ಕಳೆದ 20 ವರ್ಷದ ಹೋರಾಟದಲ್ಲಿ ಅನೇಕ ಪಕ್ಷದ ಮುಖಂಡರು ಉದಾ:- ಕಾಂಗ್ರೆಸ್, ಬಿಜೆಪಿ, ಜನತಾದಳ ಇನ್ನೂ ಅನೇಕ ಪಕ್ಷಗಳೂ ಹಾಗೂ ಸಂಘಟನೆಗಳಿಂದ ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ. ಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡುತ್ತಾರೆಂದು ಹೇಳಿ ಅವರ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ ಇಲ್ಲಿಯವರೆಗೆ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮಾದಿಗ ಸಮುದಾಯದ ರಸ್ತೆ ಬದಿಯಲ್ಲಿ ಚಪ್ಪಲಿ ಕೆಲಸ, ನಗರಸಭೆ, ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ, ಹಳ್ಳಿಗಳಲ್ಲಿ ಹಳ್ಳಿಗಾಡಿನ ಜನಾಂಗ ಜಮೀನು ಇಲ್ಲದೆ ಕೂಲಿಗಾಗಿ ನಗರ ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ವರದಿ ತಯಾರು ಮಾಡಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಮಾದಿಗ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ದೃಢಪಟ್ಟಿರುತ್ತದೆ.

ಅದನ್ನು ಸಂಪೂರ್ಣವಾಗಿ ಈಗಿನ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಆದಷ್ಟು ಬೇಗ ಸಚಿವ ಸಂಪುಟ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟು ಶೋಷಿತ ಜನಾಂಗಕ್ಕೆ ಸೇರಿದ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

Last Updated : Sep 3, 2020, 4:47 PM IST

ABOUT THE AUTHOR

...view details