ಕರ್ನಾಟಕ

karnataka

ETV Bharat / state

ಹಾಸನದ ಎಪಿಎಂಸಿಯಿಂದ ಕೈಗಾರಿಕಾ ಪ್ರದೇಶಕ್ಕೆ ಬಿತ್ತನೆ ಆಲೂಗಡ್ಡೆ ಬೀಜ ವಹಿವಾಟು ಸ್ಥಳಾಂತರ - DC R.Girish press meet

ಹಾಸನ ನಗರದಲ್ಲಿ ಆಲೂಗಡ್ಡೆ ವಹಿವಾಟನ್ನು ಎಪಿಎಂಸಿಯಿಂದ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಿದ್ದು, ಅಲ್ಲಿ ವ್ಯಾಪಾರ ನಡೆಸುವಂತೆ ವರ್ತಕರಿಗೆ, ರೈತರಿಗೆ ಜಿಲ್ಲಾಧಿಕಾರಿ ಆರ್​.ಗಿರೀಶ್​ ಮನವಿ ಮಾಡಿದ್ದಾರೆ.

DC R.Girish
ಜಿಲ್ಲಾಧಿಕಾರಿ ಆರ್​.ಗಿರೀಶ್

By

Published : May 5, 2020, 8:03 PM IST

ಹಾಸನ: ಕೊರೊನಾ ಸೋಂಕು ತಡೆಗೆ ಬಿತ್ತನೆ ಆಲೂಗಡ್ಡೆ ಬೀಜದ ವ್ಯಾಪಾರವನ್ನು ನಗರದ ಎಪಿಎಂಸಿಯಿಂದ ಕೈಗಾರಿಕೆ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದ್ದು, ರೈತರು ಮತ್ತು ವರ್ತಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಆರ್​.ಗಿರೀಶ್

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರು ಮತ್ತು ವರ್ತಕರೊಂದಿಗೆ ಆಲೂಗೆಡ್ಡೆ ಬಿತ್ತನೆ ಬೀಜದ ಬಗ್ಗೆ ಸಭೆ ನಡೆಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಾರ ಕೋಲ್ಡ್ ಸ್ಟೋರೇಜ್​ನಲ್ಲಿ ಆಲೂ ಬಿತ್ತನೆ ಬೀಜಗಳನ್ನು ಪರಿಶೀಲಿಸಲಾಗಿದ್ದು, ಕೃಷಿ ವಿಜ್ಞಾನಿಗಳಿಂದ ವರದಿ ಬರಬೇಕಿದೆ ಎಂದರು.

ಮೇ 8ರಿಂದ ಬಿತ್ತನೆ ಆಲೂಗಡ್ಡೆಯ ಮಾರಾಟ ಆರಂಭಿಸುವ ನಿರ್ಧಾರ ಮಾಡಲಾಗಿದೆ. ಪ್ರತಿ ವರ್ಷ ಎಪಿಎಂಸಿ ಆವರಣದಲ್ಲಿ ಆಲೂಗಡ್ಡೆ ಬಿತ್ತನೆ ಬೀಜವನ್ನು ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ಎಪಿಎಂಸಿಯಲ್ಲಿ ಜನಜಂಗುಳಿ ಉಂಟಾಗುವುದರಿಂದ ಕೊರೊನಾ ಸೋಂಕು ಹರಡುವ ಭೀತಿ ಇದೆ. ಆದ್ದರಿಂದ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಕೋಲ್ಡ್ ಸ್ಟೋರೆಜಿನ ಸಮೀಪದಲ್ಲಿ ಮಾರಾಟ ಮಾಡಲು ಸೂಚನೆ ನೀಡಲಾಗಿದೆ.

ವರ್ತಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ರೈತರು ಖರೀದಿಸಬಹುದು. ಇದರಿಂದ ಸಾಮಾಜಿಕ ಅಂತರವನ್ನು ಕಾಪಾಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಲೂಗಡ್ಡೆ ಸಬ್ಸಿಡಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

ABOUT THE AUTHOR

...view details