ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಮತ್ತೊಂದು ಮೃತದೇಹ ಪತ್ತೆ

ಹಾಸನ ಜಿಲ್ಲೆಯಲ್ಲಿ ನೆರೆ ಪ್ರವಾಹಕ್ಕೆ ಸಿಲುಕಿ ನಿನ್ನೆ ಪ್ರಕಾಶ್ ಎಂಬುವರ ಮೃತದೇಹ ಸಿಕ್ಕ ಬೆನ್ನಲ್ಲಿಯೇ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದೆ.

ಮೃತದೇಹ

By

Published : Aug 13, 2019, 9:31 PM IST

ಹಾಸನ:ಜಿಲ್ಲೆಯಲ್ಲಿ ನೆರೆ ಪ್ರವಾಹಕ್ಕೆ ಸಿಲುಕಿ ನಿನ್ನೆ ಪ್ರಕಾಶ್ ಎಂಬುವರ ಮೃತದೇಹ ಸಿಕ್ಕ ಬೆನ್ನಲ್ಲಿಯೇ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದೆ.

ರಮೇಶ್ (60) ನಾಪತ್ತೆಯಾಗಿದ್ದ ವ್ಯಕ್ತಿ. ಮರಗಡಿ ಗ್ರಾಮದ ರಮೇಶ್ ಎಂಬುವರು ಆಗಸ್ಟ್ 8ರಂದು ಹಾಲಿನ ಡೈರಿಗೆ ಹಾಲು ಹಾಕಿ ಬರುವೆನೆಂದು ಹೋದವರು ವಾಪಸ್​ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಾಸನದಲ್ಲಿ ಮತ್ತೊಂದು ಮೃತದೇಹ ಪತ್ತೆ

ಮತ್ತೊಂದು ವಿಚಾರ ಅಂದರೆ ಪ್ರಕಾಶ್ ಮೃತದೇಹ ಅವರ ತೋಟದ ಸಮೀಪದಲ್ಲಿಯೇ ಹರಿಯುವ ಹೇಮಾವತಿ ತೊರೆಯಲ್ಲಿ ಸಿಕ್ಕಿತ್ತು. ಎರಡು ದಿನದಿಂದ ಹೇಮಾವತಿ ತೊರೆಯಲ್ಲಿ ತೆಪ್ಪದ ಮೂಲಕ ವಿಪತ್ತು ನಿರ್ವಹಣಾ ತಂಡ ಹುಡುಕಾಟ ನಡೆಸಿದ್ದರಿಂದ ಇಂದು ಸಂಜೆ ಆತನ ಮೃತದೇಹ ಪತ್ತೆಯಾಗಿದೆ.

ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ABOUT THE AUTHOR

...view details