ಅರಕಲಗೂಡು (ಹಾಸನ) :ತಾಲೂಕಿನ ಕೊಣನೂರು ಹೋಬಳಿ ಬಿಸಲೆಹಳ್ಳಿ-ಚಿಕ್ಕಬೊಮ್ಮನಹಳ್ಳಿ ಕೆರೆಕೋಡಿ ಸಮೀಪವೇ ಅವೈಜ್ಞಾನಿಕ ಕಾಮಗಾರಿಯೊಂದಕ್ಕೆ ಚಾಲನೆ ನೀಡಿದ್ದು, ಇದರಿಂದ ಕೆರೆಯ ಸುತ್ತಮುತ್ತಲಿನ ರೈತರ ಜಮೀನು ನೀರಿನಲ್ಲಿ ಮುಳುಗಡೆಯಾಗುವ ಭೀತಿ ಎದುರಾಗಿದೆ.
ಶಿವಮೊಗ್ಗ ಮಲೆನಾಡು ಅಭಿವೃದ್ದಿ ಮಂಡಳಿ ಅಡಿ ಬರುವ ಹಾಸನ ಜಿಲ್ಲಾ ಪಂಚಾಯತ್ ಇಂಜಿನಿಯರ್ಗಳು ಬಿಸಲೆಹಳ್ಳಿ-ಚಿಕ್ಕಬೊಮ್ಮನಹಳ್ಳಿ ಕೆರೆ ಮೇಲೆಯೇ ಅವೈಜ್ಞಾನಿಕವಾಗಿ ಡಾಂಬರು ರಸ್ತೆ ಹಾಗೂ 200 ಮೀಟರ್ ಅಂತರದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಮುಂದಾಗಿದ್ದಾರೆ. ಅಕಸ್ಮಾತ್ ಈ ರಸ್ತೆ ಕುಸಿದರೆ ಕೆರೆಕೋಡಿ ಒಡೆಯುವ ವಾತಾವರಣ ಸೃಷ್ಟಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಈ ಕೆರೆ ತುಂಬಿದ ಬಳಿಕ ನೀರು ಹರಿದು ಹೋಗಲು ಈಗಾಗಲೇ ಕೋಡಿ ನಿರ್ಮಿಸಲಾಗಿದೆ. ಈ ಕೆರೆ ಮೇಲೆಯೇ ಅವೈಜ್ಞಾನಿಕವಾಗಿ ಡಾಂಬರು ರಸ್ತೆ ನಿರ್ಮಿಸಿ 200 ಮೀಟರ್ ಅಂತರದಲ್ಲೇ 5 ಲಕ್ಷ ವೆಚ್ಚದಲ್ಲಿ ಇನ್ನೊಂದು ಚೆಕ್ ಡ್ಯಾಂ ನಿರ್ಮಿಸಲು ಇಂಜಿನಿಯರ್ಗಳು ಕೈ ಹಾಕಿದ್ದಾರೆ.