ಹಾಸನ: ಅಪರಿಚಿತ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹಾಸನದ ನೂತನ ನಿಲ್ದಾಣದ ರೈಲ್ವೆ ಗೇಟ್ ಸಮೀಪ ನಡೆದಿದೆ.
ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವು - ಅನುಮಾನಸ್ಪದವಾಗಿ ಮಹಿಳೆ ಸಾವು ಕೊಲೆ ಶಂಕೆ
‘ಕೊಲೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರೆ, ಇತ್ತ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
![ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವು](https://etvbharatimages.akamaized.net/etvbharat/prod-images/768-512-3552705-thumbnail-3x2-hsn.jpg)
ಸಾವನ್ನಪ್ಪಿರುವ ಮಹಿಳೆ
ರೈಲಿನ ಕೆಳಭಾಗಕ್ಕೆ ಸಿಲುಕಿದ್ದ ಕಾರಣ ಅಂಗಾಗಗಳು ತುಂಡಾಗಿಲ್ಲ. ಮಹಿಳೆಯ ಶವವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಕೊಲೆ ಅನಿಸುತ್ತದೆ. ಕೊಲೆ ಮಾಡಿದ ಬಳಿಕ ಆಕೆಯನ್ನು ರೈಲ್ವೆ ಹಳಿಗಳ ಮೇಲೆ ಎಸೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.