ಹಾಸನ:ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಮಾಲೀಕ ಕೂಡಿ ಹಾಕಿದ್ದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಕಾರ್ಮಿಕರನ್ನು ಬಂಧಮುಕ್ತ ಮಾಡಿದ್ದಾರೆ.
ಹಾಸನದಲ್ಲಿ ಅಮಾನವೀಯ ಘಟನೆ: ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ - ತಲೆಮರೆಸಿಕೊಂಡಿರುವ ಜಮೀನು ಮಾಲೀಕ ಮುನೇಶ್
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಮಾಲೀಕನೊಬ್ಬ ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಶೆಡ್ನೊಳಗೆ ಕೂಡಿ ಹಾಕಿದ ಅಮಾನವೀಯ ಘಟನೆ ನಡೆದಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಕಾರ್ಮಿಕರನ್ನು ಬಂಧಮುಕ್ತ ಮಾಡಿದ್ದಾರೆ.
![ಹಾಸನದಲ್ಲಿ ಅಮಾನವೀಯ ಘಟನೆ: ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ owner locked a group of workers in a shed](https://etvbharatimages.akamaized.net/etvbharat/prod-images/768-512-14933961-thumbnail-3x2-bin.jpg)
ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ
ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ
ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಒಂದು ಶೆಡ್ನೊಳಗೆ ಕೂಡಿಹಾಕಿ ಅಲ್ಲಿಯೇ ಊಟ ತಿಂಡಿ ನೀಡುತ್ತಿದ್ದರು ಎನ್ನಲಾಗ್ತಿದೆ. ಸುಮಾರು 55 ಮಂದಿ ಕಾರ್ಮಿಕರನ್ನ ಕೂಡಿ ಹಾಕಲಾಗಿತ್ತು. ಇದರಲ್ಲಿ 50 ಪುರುಷ ಕಾರ್ಮಿಕರು ಹಾಗೂ ಹತ್ತು ಮಂದಿ ಮಹಿಳೆಯರು ಇದ್ದರು. ಸದ್ಯ ಪೊಲೀಸರು ಇವರನ್ನೆಲ್ಲಾ ಬಂಧಮುಕ್ತಗೊಳಿಸಿದ್ದಾರೆ. ಜಮೀನು ಮಾಲೀಕ ಮುನೇಶ್ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಇಡೀ ಗ್ರಾಮವನ್ನೇ ಶಿಕ್ಷಣ ಕೇಂದ್ರವನ್ನಾಗಿ ಪರಿವರ್ತಿಸಿದ ಸರ್ಕಾರಿ ಶಿಕ್ಷಕ