ಸಕಲೇಶಪುರ: ಸಂಘದ ಆಡಳಿತ ಮಂಡಳಿ ವಿರುದ್ಧವೇ ಉಪಾಧ್ಯಕ್ಷನೊಬ್ಬಗಂಭೀರ ಆರೋಪ ಮಾಡಿ ಏಕಾಂಗಿಯಾಗಿ ಸಂಘದ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಮಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಸಂಘದ ವಿರುದ್ಧವೇ ಭ್ರಷ್ಟಾಚಾರ ಆರೋಪ: ಏಕಾಂಗಿಯಾಗಿ ಪ್ರತಿಭಟನೆ - ಭ್ರಷ್ಟಾಚಾರ ಆರೋಪ ಪ್ರತಿಭಟನೆ
ತಾಲೂಕಿನ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉದಯಶಂಕರ್ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
![ಸಂಘದ ವಿರುದ್ಧವೇ ಭ್ರಷ್ಟಾಚಾರ ಆರೋಪ: ಏಕಾಂಗಿಯಾಗಿ ಪ್ರತಿಭಟನೆ](https://etvbharatimages.akamaized.net/etvbharat/prod-images/768-512-5053591-thumbnail-3x2-net.jpg)
ಸಂಘದ ವಿರುದ್ಧವೇ ಭ್ರಷ್ಟಾಚಾರ ಆರೋಪ: ಪ್ರತಿಭಟನೆ
ಸಂಘದ ವಿರುದ್ಧವೇ ಭ್ರಷ್ಟಾಚಾರ ಆರೋಪ: ಪ್ರತಿಭಟನೆ
ತಾಲೂಕಿನ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉದಯಶಂಕರ್ ಗಂಭೀರ ಆರೋಪ ಮಾಡಿದ್ದು, ಕೆಲಕಾಲ ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಪಡಿತರ ಧಾನ್ಯ ವಿತರಣೆಯಲ್ಲಿ ಅಕ್ರಮ ಎಸಗಿರುವುದಲ್ಲದೇ ಪಡಿತರ ನೀಡಿ ಉಳಿದಿರುವ ಚೀಲಗಳನ್ನು ಕೂಡ ಅಧಿಕ ಬೆಲೆಗೆ ಮಾರಾಟ ಮಾಡಿಕೊಂಡು ಅಧ್ಯಕ್ಷ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.