ಹಾಸನ:ಇಂದಿನಿಂದ ಮದ್ಯ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯಪ್ರಿಯರು ಬಾರ್ಗಳ ಬಾಗಿಲಿಗೆ ಪೂಜೆ ಮಾಡಿ ಗಮನಸೆಳೆದರು.
ರಾಜ್ಯದೆಲ್ಲೆಡೆ ಮದ್ಯ ಮಾರಾಟಕ್ಕೆ ಅವಕಾಶ.. ಬಾರ್ಗೆ ಪೂಜೆ ಸಲ್ಲಿಸಿದ ಮದ್ಯಪ್ರಿಯರು.. - Lockdown Effect
ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರ ಬಳಿ ಇರುವ ಎಂಎಸ್‌ಐಎಲ್ ಮದ್ಯದಂಗಡಿಗೆ ಭಾನುವಾರ ಸಂಜೆ ಆಗಮಿಸಿದ ಕೆಲ ಮದ್ಯ ಪ್ರಿಯರು ಪೂಜೆ ಸಲ್ಲಿಸಿದರು.
ರಾಜಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ...ಬಾರ್ಗೆ ಪೂಜೆ ಸಲ್ಲಿಸಿದ ಮದ್ಯಪ್ರಿಯರು
ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರ ಬಳಿ ಇರುವ ಎಂಎಸ್‌ಐಎಲ್ ಮದ್ಯದಂಗಡಿಗೆ ಭಾನುವಾರ ಸಂಜೆ ಆಗಮಿಸಿದ ಕೆಲ ಮದ್ಯ ಪ್ರಿಯರು,ತೆಂಗಿನಕಾಯಿ ಒಡೆದು, ಕುಂಕುಮ ಹಚ್ಚಿ,ಮಲ್ಲಿಗೆ ಹೂವನ್ನ ಹಾಕಿ ಪೂಜೆ ಸಲ್ಲಿಸಿದರು. ಅಲ್ಲದೆ ಮದ್ಯದ ಹೆಸರನ್ನ ದೇವರ ನಾಮದಂತೆ ಪಠಿಸಿ ನಮನ ಸಲ್ಲಿಸಿದರು.
ಮುಂದೆ ಯಾವ ಸಂದರ್ಭದಲ್ಲೂ ಮದ್ಯದಂಗಡಿ ಬಾಗಿಲು ಹಾಕದಂತೆ ಕೋರಿದ್ರು.