ಹಾಸನ: ಕೋವಿಡ್-19 ಎಂಬ ಹೆಮ್ಮಾರಿ ದೇಶದ ಜನರಿಗಷ್ಟೇ ಅಲ್ಲ ವಿಶ್ವದ ಎಲ್ಲರಿಗೂ ಸಂಕಷ್ಟವನ್ನು ತಂದೊಡ್ಡಿದೆ. ಆದರೆ ಜಿಲ್ಲೆಯ ಯುವತಿಯೊಬ್ಬಳು ತನ್ನ ಎರಡು ಕೈಗಳಿಂದ ಏಕಕಾಲದಲ್ಲಿ ಚಿತ್ರ ಬಿಡಿಸಿ "ASIA BOOK OF RECORD" ಮತ್ತು "INDIA BOOK OF RECORD" ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.
ಚಿತ್ರಕಲೆಯಲ್ಲಿ ‘ASIA BOOK OF RECORD’: ಇದು ಹಾಸನ ಯುವತಿಯ ಸಾಧನೆ - Meghna of Palya village of Hassan Alur Taluk
ಹಾಸನ ಜಿಲ್ಲೆಯ ಯುವತಿಯೊಬ್ಬಳು ಚಿತ್ರಕಲೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮುಡೇಗಿರಿಸಿಕೊಂಡು ಅಭೂತಪೂರ್ವ ಸಾಧನೆ ಮಾಡಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಗ್ರಾಮದ ಮೇಘನಾ ಈ ಸಾಧನೆ ಮಾಡಿದ್ದಾಳೆ. ಸದ್ಯ ಫಾರ್ಮಸಿ ಓದುತ್ತಿರುವ ಈಕೆ ಕೇವಲ 50 ಸೆಕೆಂಡ್ನಲ್ಲಿ ಎರಡು ಕೈಗಳಿಂದ ಗಣಪನ ಚಿತ್ರ ಬಿಡಿಸಿ ರೆಕಾರ್ಡ್ ಮಾಡಿದ್ದಾಳೆ. ಪೆನ್ಸಿಲ್ ಶೇಡ್ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುವ ಈಕೆ ಚಿಕ್ಕಂದಿನಿಂದಲೂ ಏನನ್ನಾದರೂ ಸಾಧಿಸಬೇಕು ಅಂದುಕೊಂಡಿದ್ದಳಂತೆ. ಇದರ ಪ್ರತಿಫಲವಾಗಿ ಒಲಿದು ಬಂದಿದ್ದು ಎರಡು ಪ್ರಶಸ್ತಿಗಳು.
ಕೊರೊನಾ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಭಿನ್ನವಾಗಿ ತನ್ನ ಚಿತ್ರ ಬಿಡಿಸಿ ಲಂಡನ್ನಲ್ಲಿ ನಡೆಯುತ್ತಿರುವ ಚಿತ್ರಕಲಾ ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದಾಳೆ. ಈಗಾಗಲೇ ತನ್ನ ಕುಟುಂಬ, ಸ್ನೇಹಿತರು, ಗಾಯಕರು, ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿಗೆ ನಿಧನರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸೇರಿದಂತೆ ಹಲವರ ಚಿತ್ರಗಳನ್ನು ಪೆನ್ಸಿಲ್ಸ್ ಸ್ಕೆಚ್ ಮೂಲಕ ಬಿಡಿಸಿ ಸೈ ಎನ್ನಿಸಿಕೊಂಡಿದ್ದಾಳೆ.