ಹಾಸನ : ಸರ್ಕಾರಕ್ಕೆ ಯಾರು ಡೆಡ್ ಲೈನ್ ಕೊಟ್ಟರು ಏನೂ ಆಗಲ್ಲ. ಅದೆಲ್ಲಾ ಅವರ ಭ್ರಮೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.
23 ರ ನಂತರ ಸರ್ಕಾರ ಅಲ್ಲೋಲ ಕಲ್ಲೋಲ... ಓ ಬ್ರಮೆ ಅಂದ್ರು ಎಚ್.ಡಿ ರೇವಣ್ಣ - Kannada news
ರಾಮನ ಭಜನೆ ಮಾಡಿ ಸಾಕಾಗಿದೆ. ಈಗ ರಾಮನನ್ನ ಬಿಟ್ಟು ಕುಮಾರಣ್ಣನನ್ನ ಹಿಡಿದುಕೊಂಡಿದ್ದಾರೆ ಎಂದು ಬಿ.ಎಸ್.ವೈ ಗೆ ಟಾಂಗ್ ಕೊಟ್ಟ ಎಚ್.ಡಿ. ರೇವಣ್ಣ

ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ
ನಗರದಲ್ಲಿ ಮಾತನಾಡಿ, ಮೇ 23 ರ ಬಳಿಕ ಸರ್ಕಾರ ಅಲ್ಲೋಲ ಕಲ್ಲೋಲ ಎಂದಿದ್ದ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ರಾಮನ ಭಜನೆ ಮಾಡಿ ಸಾಕಾಗಿದೆ. ಈಗ ರಾಮನನ್ನ ಬಿಟ್ಟು ಕುಮಾರಣ್ಣನನ್ನ ಹಿಡಿದುಕೊಂಡಿದ್ದಾರೆ ಅಂತ ವ್ಯಂಗ್ಯವಾಡಿದರು. ಇನ್ನು ಎರಡು ಉಪ ಚುನಾವಣೆಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಲ್ಲವೂ ಸರಿಯಾಗುತ್ತೆ ಯಾರು ವರಿ ಮಾಡಿಕೊಳ್ಳೋದು ಬೇಡ ಎಂದರು.
ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ
ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರೇವಣ್ಣ, ಏನು ಆಗಲ್ಲ ನಡಿರೀ ನಡಿರೀ ಅಂತ ಜಿಲ್ಲಾ ಪಂಚಾಯಿತಿ ಕಡೆ ಹೊರಟೆ ಬಿಟ್ಟರು.