ಕರ್ನಾಟಕ

karnataka

ETV Bharat / state

ರಾಮನಗರಕ್ಕೆ ಕುಮಾರಸ್ವಾಮಿ ಏನೇನ್ ಮಾಡಿದ್ದಾರೆ ಅಂತ ದಾಖಲೆ ತೆಗೆದು ನೋಡಿದ್ರೆ ಗೊತ್ತಾಗುತ್ತೆ: ಎಚ್‌.ಡಿ.ರೇವಣ್ಣ - ಶಾಸಕ ಕೆ ಎಂ ಶಿವಲಿಂಗೇಗೌಡ

ಮೈಸೂರು-ಬೆಂಗಳೂರು ಬೈಪಾಸ್​ ರಸ್ತೆ​ ಕುಮಾರಣ್ಣನ ಕಾಲದಲ್ಲಿ ಆಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಈ ಮೂಲಕ ಡಿಕೆಶಿ ಅವರಿಗೆ ಟಾಂಗ್ ಕೊಟ್ಟರು.

ಮಾಜಿ ಸಚಿವ ಎಚ್​ ಡಿ ರೇವಣ್ಣ
ಮಾಜಿ ಸಚಿವ ಎಚ್​ ಡಿ ರೇವಣ್ಣ

By ETV Bharat Karnataka Team

Published : Oct 26, 2023, 9:47 PM IST

ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯೆ

ಹಾಸನ: ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆಗೊಳಿಸುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್​ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಗರಂ ಆಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿಯಲ್ಲಿ ಇಂದು ಮಾತನಾಡಿದ ಅವರು, ನಮಗೆ ಗೊತ್ತಿಲ್ಲಪ್ಪ, ಯಾವುದನ್ನು ಸೇರಿಸ್ತಾರೆ, ಯಾರಿಗೆ ಗೊತ್ತೈತೆ?. ರಾಮನಗರಕ್ಕೆ ಕುಮಾರಸ್ವಾಮಿ ಅವರು ಏನೇನ್ ಮಾಡಿದ್ದಾರೆ ಅಂತ ದಾಖಲೆ ತೆಗೆದು ನೋಡಿದ್ರೆ ಗೊತ್ತಾಗುತ್ತೆ ಎಂದರು.

ಇಂಜಿನಿಯರಿಂಗ್ ಕಾಲೇಜಿಗೆ 120 ಕೋಟಿ ರೂ ಕೊಟ್ಟಿದ್ದಾರೆ. ಯಾರ ಮಕ್ಕಳು ಓದ್ತಾರೆ, ಕುಮಾರಸ್ವಾಮಿ ಮಕ್ಕಳು ಓದ್ತಾರಾ? ಮೆಡಿಕಲ್ ಕಾಲೇಜು ಬೇಕು ಅಂತ ಕೆಲವರು ತಡೆ ಹಿಡಿದಿದ್ದಾರೆ. ರಾಮನಗರವನ್ನು ಒಂದು ಜಿಲ್ಲಾ ಕೇಂದ್ರ ಮಾಡಬೇಕು, ಕೆಂಪೇಗೌಡರ ಹೆಸರಿಡಬೇಕು ಅಂತ ಕುಮಾರಸ್ವಾಮಿ ತೀರ್ಮಾನ ಮಾಡಿದ್ರು. ಇಲ್ಲಾ ರಾಮನಗರ ಜಿಲ್ಲೆ ಎಂದು ಹೆಸರಿಬೇಕು ಅಂತ ಕೆಲವರು ಹೇಳಿದ ಮೇಲೆ ರಾಮನಗರ ಅಂತ ಹೆಸರಿಟ್ಟರು. ರಾಮನಗರ ಜಿಲ್ಲೆಯಲ್ಲಿ ಎಷ್ಟು ಕಾಲೇಜುಗಳು, ಕೆಪಿಎಸ್‌ಸಿ ಸ್ಕೂಲ್, ರಸ್ತೆಗಳು, ಡಿಪ್ಲೋಮಾ ಕಾಲೇಜುಗಳಿವೆ. ದಾಖಲೆಗಳನ್ನು ತೆಗೆದು ನೋಡಿದರೆ ಗೊತ್ತಾಗುತ್ತೆ ಎಂದು ಹೇಳಿದರು.

ಮೈಸೂರು-ಬೆಂಗಳೂರು ಬೈಪಾಸ್ ರೋಡ್ ಕುಮಾರಣ್ಣ ಅವರ ಕಾಲದಲ್ಲಿ ಆಗಿದೆ. ನಮ್ಮ ಕಾಲದಲ್ಲಿ ರೈತರು 90% ಲ್ಯಾಂಡ್ ಕೊಟ್ಟಿದ್ದಕ್ಕೆ ಇವತ್ತು ಮೈಸೂರು-ಬೆಂಗಳೂರು ರಸ್ತೆ ಆಗಿದೆ. ರಾಮನಗರ, ಚನ್ನಪಟ್ಟಣ, ಬಿಡದಿ ಬೈಪಾಸ್ ಮಾಡಿದವರು ಯಾರು?. ರಾಮನಗರ, ಚಿಕ್ಕಬಳ್ಳಾಪುರವನ್ನು ಯಾರು ಜಿಲ್ಲಾ ಕೇಂದ್ರ ಮಾಡಿದ್ದು?. ನಾನು ಯಾರ ಬಗ್ಗೆ ಟೀಕೆ, ಟಿಪ್ಪಣಿ ಮಾಡಲ್ಲ. ಮೆಡಿಕಲ್ ಕಾಲೇಜು, ರಾಜೀವ್‌ಗಾಂಧಿ ವಿಶ್ವವಿದ್ಯಾಲಯವನ್ನು ಹತ್ತು ವರ್ಷದಿಂದ ಯಾರು ತಡೆದಿದ್ದಾರೆ. ಈ ಕುರಿತು ಕಾಲ ಬಂದಾಗ ಹೇಳುತ್ತೇನೆ ಎಂದ ಅವರು, ರಾಮನಗರ ಜಿಲ್ಲಾ ಕೇಂದ್ರ ತೆರೆಯಲು ಬಂದಾಗ ಮಾತನಾಡುತ್ತೇನೆ ಎಂದು ಹೇಳಿದರು.

ಶಾಲಾ ಪಠ್ಯಪುಸ್ತಕಕ್ಕೆ ಗೆಲುವು ಸಾಧಿಸಿದ ಕೆಲವು ರಾಜರುಗಳ ಹೆಸರುಗಳ ಸೇರ್ಪಡೆ ವಿಚಾರ ಮಾತನಾಡಿ, ಈ ರಾಜ್ಯದ ದಕ್ಷಿಣ ಭಾಗದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮೈಸೂರು ಮಹಾರಾಜರು ಇದ್ದರು. ಮಹಾರಾಜರ ಇತಿಹಾಸ, ಕರ್ನಾಟಕ ರಾಜ್ಯದಲ್ಲಿ ಯಾರ್ಯಾರು ಆಳ್ವಿಕೆ ಮಾಡಿದ್ರು ಅವರೆನ್ನೆಲ್ಲ ಸೇರಿಸಲಿ. ಕೃಷ್ಣರಾಜ ಒಡೆಯರ್ ಅವರಿಂದ ಹಿಡಿದು ಇಲ್ಲಿಯವರೆಗೆ ಏನೇನ್ ನಡೆದಿದೆ ಆ ವಿದ್ಯಮಾನಗಳನ್ನೆಲ್ಲ ಸೇರಿಸಲಿ ಎಂದು ಒತ್ತಾಯಿಸುವುದಾಗಿ ತಿಳಿಸಿದರು.

ಹೊಸದಾಗಿ ಸೇರಿಸಲಿ. ನಾವೇನು ಬೇಡ ಅಂತೀವಾ?. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಕ್ಕಳಿಗೆ ಮೂಲಸೌಕರ್ಯ ಕೊಡಲು ಆಗಿಲ್ಲ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಲು ಆಗ್ತಿಲ್ಲ. ಇನ್ನೇನು ಮಾಡ್ತಾರೆ ಇವರು. ಕಾಲೇಜುಗಳಲ್ಲಿ ಡೆಸ್ಕ್, ಮೂಲಸೌಕರ್ಯಗಳಿಲ್ಲ. ಉಪನ್ಯಾಸಕರಿಲ್ಲ. ಮೊದಲು ಮೂಲಸೌಕರ್ಯ ಕೊಡಿ. ರೈತರ ಪಂಪ್‌ಸೆಟ್‌ಗಳಿಗೆ ಮೊದಲು ಹಗಲು ವೇಳೆ ಕರೆಂಟ್ ಕೊಡಿ ಎಂದರು.

ಇದನ್ನೂ ಓದಿ:H D Revanna: ಎರಡು ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಮುಗಿಸಲು ಹೊರಟಿವೆ: ಎಚ್.ಡಿ. ರೇವಣ್ಣ

ABOUT THE AUTHOR

...view details