ಕರ್ನಾಟಕ

karnataka

ETV Bharat / state

ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಬಾಲ್ಯದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸಬೇಡಿ: ಪೈಮುದಿನ್ ಖಾದ್ರಿ - ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹೇಮಂತ್ ಕುಮಾರ್

ಶಿಕ್ಷಣಕ್ಕೆ ಯಾವುದೇ ಜಾತಿ ಬೇಧ-ಭಾವ ಭಾಷೆಯಿಲ್ಲ. ಶಿಕ್ಷಣ ಪ್ರತಿಯೊಬ್ಬರಿಗೂ ಪಡೆಯುವ ಹಕ್ಕಿದೆ ಅದನ್ನ ಬಾಲ್ಯದಲ್ಲಿಯೇ ಮೊಟಕುಗೊಳಿಸಬೇಡಿ ಎಂದು ಮುಸ್ಲಿಂ ಧರ್ಮಗುರು ಪೈಮುದಿನ್​ ಖಾದ್ರಿ ಹೇಳಿದ್ರು.

Adam Charitable
ಆ್ಯಡಮ್ ಚಾರಿಟಬಲ್ ಟ್ರಸ್ಟ್ ಪ್ರತಿಭಾ ಪುರಸ್ಕಾರ ಸಮಾರಂಭ

By

Published : Aug 24, 2020, 7:05 PM IST

Updated : Aug 24, 2020, 7:31 PM IST

ಅರಸೀಕೆರೆ(ಹಾಸನ):ಇಸ್ಲಾಂ ಧರ್ಮದಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಬಹಳ ಕಡಿಮೆ ಇದೆ. ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಗುಣಮಟ್ಟದ ಯಶಸ್ಸು ಗಳಿಸಲು ಶಿಕ್ಷಣ ಅಗತ್ಯ ಎಂದು ಸುನ್ನಿ ಜಮಾಯಿತ್ ಕಮಿಟಿಯ ಧರ್ಮಗುರು ಇಮಾಮ್ ಪೈಮುದಿನ್ ಖಾದ್ರಿ ಅಭಿಪ್ರಾಯಪಟ್ಟರು.

ನಗರದ ಶಾದಿ ಮಹಲ್​ನಲ್ಲಿ ಆಯೋಜಿಸಿದ್ದ ಆ್ಯಡಮ್ ಚಾರಿಟೇಬಲ್ ಟ್ರಸ್ಟ್ ಮತ್ತು ಗ್ಲೋಬಲ್ ಶಾಹಿನ್ ಕಾಲೇಜು ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜನಾಂಗದಲ್ಲಿ ವಿದ್ಯಾರ್ಜನೆ ಮತ್ತು ವ್ಯಾಸಂಗಕ್ಕೆ ಒತ್ತು ನೀಡುವುದು ಕಷ್ಟಕರ ಸಂಗತಿಯಾಗಿದೆ. ಆದರಿಂದ ನಮ್ಮವರು ಸಮಾಜದಲ್ಲಿ ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಮೀವುಲ್ಲಾ ಮಾತನಾಡಿ, ನಮ್ಮ ಆ್ಯಡಮ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಣಕ್ಕೆ ಉತ್ತಮ ಚಾಲನೆ ನೀಡಿ ಪ್ರಗತಿಶೀಲರನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ಕೆ ಸಹಕರಿಸಬೇಕು. ಚಿಕ್ಕವಯಸ್ಸಿನಲ್ಲಿಯೇ ದುಡಿಮೆ ಮಾಡುವ ಬದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ಆ್ಯಡಮ್ ಚಾರಿಟೇಬಲ್ ಟ್ರಸ್ಟ್​ ಮತ್ತು ಗ್ಲೋಬಲ್​ ಶಾಹಿನ್ ಕಾಲೇಜು ವತಿಯಿಂದ ಪ್ರತಿಭಾ ಪುರಸ್ಕಾರ​

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುವ ಮತ್ತು ಪ್ರೋತ್ಸಾಹಿಸುವ ನಮ್ಮ ಆ್ಯಡಮ್ ಚಾರಿಟೇಬಲ್ ಟ್ರಸ್ಟ್​ನ ಶಿಕ್ಷಕರ ವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಣಕ್ಕೆ ಯಾವುದೇ ಜಾತಿ ಬೇಧ-ಭಾವ ಭಾಷೆಯಿಲ್ಲ. ಶಿಕ್ಷಣ ಪ್ರತಿಯೊಬ್ಬರಿಗೂ ಪಡೆಯುವ ಹಕ್ಕಿದೆ. ಅದನ್ನ ಯಾರು ಕೂಡ ಬಾಲ್ಯದಲ್ಲಿಯೇ ಮೊಟಕುಗೊಳಿಸಿ ಅವರನ್ನು ಬಾಲ ಕಾರ್ಮಿಕ ಪದ್ಧತಿಗೆ ದೂಡಬೇಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಗ್ಲೋಬಲ್ ಶಾಹಿನ್ ಕಾಲೇಜಿನ ವ್ಯವಸ್ಥಾಪಕ ಇ.ಕೆ.ರಿಯಾಜ್ ಖಾನ್, ಜಾಮಿಯಾ ಮಸೀದಿ ಅಧ್ಯಕ್ಷ ಸೈಯದ್ ಸರ್ದಾರ್, ಅಪ್ರೋಜ್ ಪಾಷ, ಜಮಿಲ್ ಅಹಮದ್. ಅನಿಲ್ ಪಾಷಾ, ನಸಿಮಾಬಾನು, ಶಫೀವುಲ್ಲಾ. ಮುಸ್ಥಾಫ್, ಸುಲೇಮಾನ್ ಸೇಟ್, ಹಾಗೂ ಪತ್ರಕರ್ತ ಸಂಘದ ಅಧ್ಯಕ್ಷ ಕಣಕಟ್ಟೆ ಕುಮಾರ್ ಉಪಸ್ಥಿತರಿದ್ದರು.

Last Updated : Aug 24, 2020, 7:31 PM IST

ABOUT THE AUTHOR

...view details