ಸಕಲೇಶಪುರ:ಜಾತಿ ನಿಂದನೆ ಆರೋಪಕ್ಕೆ ಗುರಿಯಾಗಿರುವ ಇಒ ಹರೀಶ್ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ದಲಿತ ಸಂಘಟನೆಗಳ ಮುಖಂಡರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್‌ಗೆ ಮನವಿ ಸಲ್ಲಿಸಿದರು.
ಬಾಳ್ಳುಪೇಟೆ ಚಿಕ್ಕನಾಯಕನಹಳ್ಳಿ ಗ್ರಾಮದ ಜಯಕುಮಾರ್ ಎಂಬುವರ ಮೇಲೆ ಇಒ ಹರೀಶ್ ವಿನಾ ಕಾರಣ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ. ಆದರೂ ಸಹ ಪೊಲೀಸರು ಅವರನ್ನು ಬಂಧಿಸಲು ಮುಂದಾಗದಿರುವುದು ಕಾನೂನು ಉಲ್ಲಂಘನೆಯಾಗಿದೆ. ಕೂಡಲೇ ಅವರನ್ನು ಬಂಧಿಸಲು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಕೇಂದ್ರದಲ್ಲಿ ವಿವಿಧ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ದಲಿತ ಮುಖಂಡರಾದ ದೊಡ್ಡಯ್ಯ, ಸಂಘಟನೆಯ ಪ್ರಮುಖರಾದ ವಳಲಹಳ್ಳಿ ವೀರೇಶ್, ಮಳಲಿ ಶಿವಣ್ಣ, ನಲ್ಲುಲ್ಲಿ ಈರಪ್ಪ, ಬೈಕೆರೆ ದೇವರಾಜ್, ಮೋಹನ್ ಅಚ್ಚರಡಿ ಮುಂತಾದವರು ಇದ್ದರು.