ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ ಅವಘಡ: 50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್​​ಗಳು ಭಸ್ಮ - ಬ್ಯಾಟರಿಗಳು ಬ್ಲಾಸ್ಟ್

ಬೆಳಗ್ಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಗಮನಿಸಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ವೇಳೆಗೆ ಬೆಂಕಿ ತೀವ್ರವಾಗಿ ವ್ಯಾಪಿಸಿದ್ದು, ಕಟ್ಟಡದ ಒಳಗಿದ್ದ ಬೌನ್ಸ್ ಬೈಕ್‌ಗಳು ಬೆಂಕಿಗಾಹುತಿಯಾಗಿವೆ.

accidental-fire-50-bounce-scooters-burn-in-hasana
50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್ ಗಳು ಭಸ್ಮ..

By

Published : Jan 28, 2021, 3:21 PM IST

ಹಾಸನ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಸುಮಾರು 50ಕ್ಕೂ ಹೆಚ್ಚು ಸ್ಕೂಟರ್​​ಗಳು ಬೆಂಕಿಗೆ ಆಹುತಿಯಾದ ಘಟನೆ ನಗರದ ಹೊರವಲಯದ ಪ್ರಶಾಂತ್ ನಿಲಯ ಎಂಬ ಕಟ್ಟಡದಲ್ಲಿ ನಡೆದಿದೆ.

50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್​ಗಳು ಭಸ್ಮ

ಓದಿ: ಬೇರೆ - ಬೇರೆ ಮದುವೆ ಬಳಿಕ ಲವ್​ನಲ್ಲಿ ಬಿದ್ದರು.. ನಂತರ ನೇಣಿಗೆ ಶರಣಾದ ಪ್ರೇಮಿಗಳು!

ಬೆಳಗ್ಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಗಮನಿಸಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ವೇಳೆಗೆ ಬೆಂಕಿ ತೀವ್ರವಾಗಿ ವ್ಯಾಪಿಸಿದ್ದು, ಕಟ್ಟಡದ ಒಳಗಿದ್ದ ಬೌನ್ಸ್ ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಜೊತೆಗೆ ಬ್ಯಾಟರಿಗಳು ಬ್ಲಾಸ್ಟ್ ಆಗಲಾರಂಭಿಸಿವೆ.

ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಬೆಂಕಿ ಅನಾಹುತದಿಂದ ಕಟ್ಟಡ ಮಾಲೀಕರು, ಬೌನ್ಸ್ ಬೈಕ್ ಮಾಲೀಕರು ಕಂಗಾಲಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.

ಅಲ್ಲದೇ ನೂರಾರು ಬೈಕ್​​ಗಳನ್ನು ಸ್ಥಳೀಯರು ಹೊರಗೆ ತಂದು ನಿಲ್ಲಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.

ABOUT THE AUTHOR

...view details