ಹಾಸನ:ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪದಲ್ಲಿ ನಡೆದಿದೆ.
ಧರಣಿ (32) ಮತ್ತು ನವ್ಯ (5) ಮೃತ ದುರ್ದೈವಿಗಳು. ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮ ಡಿ.ಕರಡೇವುನಿಂದ ಉದಯಪುರಕ್ಕೆ ಹೋಗುತ್ತಿದ್ದ ಅಪ್ಪ-ಮಗಳಿಗೆ ಚನ್ನರಾಯಪಟ್ಟಣ ಸಮೀಪದ ಜೋಡಿಕಟ್ಟೆ ಹಿರೇಹಳ್ಳಿ ಗ್ರಾಮದ ರಾಷ್ಟ್ರೀಯ ದಾರಿ 75ರಲ್ಲಿ ಹಾಸನದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.