ಚನ್ನರಾಯಪಟ್ಟಣ: ಮಂಗಳೂರು ಎಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಕಾರು ಚಾಲಕ ಲೋಕೇಶ್ ಆಚಾರ್ಯ ಚನ್ನರಾಯಪಟ್ಟಣದ ನಂದಗೋಕುಲ ಲಾಡ್ಜ್ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ.
ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕೆಲಸದ ನಿಮಿತ್ತ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವುದಾಗಿ ಚನ್ನರಾಯಪಟ್ಟಣದಲ್ಲಿ ಇಳಿದಿದ್ದಾರೆ. ಲಾಡ್ಜ್ನಲ್ಲಿ ಬಾಡಿಗೆ ಪಡೆದಿದ್ದಾರೆ. ಮರುದಿನ ಸಂಜೆಯಾದರೂ ಬಾಗಿಲು ತೆರೆಯದಿದ್ದಾಗ, ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ನಂತರ ಪೊಲೀಸರು ಬಾಗಿಲು ತೆಗೆದು ನೋಡಿದಾಗ, ಬೆಡ್ ಶೀಟ್ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಲೋಕೇಶ್ ಆಚಾರ್ಯ ದೇಹ ಪತ್ತೆಯಾಗಿದೆ. ಹಾಸನ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.