ಹಾಸನ:ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರನ್ನು ಕೂಡಲೇ ಬಂಧಿಸಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ಎಬಿವಿಪಿ ಸಹಿ ಸಂಗ್ರಹ ಮಾಡಿದೆ.
ಹಾಸನ: ಡ್ರಗ್ಸ್ ಮಾಫಿಯಾ ನಿರ್ಮೂಲನೆಗಾಗಿ ಎಬಿವಿಪಿಯಿಂದ ಸಹಿ ಸಂಗ್ರಹ - ABVP Signature Collection
ರಾಜ್ಯದ ಕಾಲೇಜುಗಳಿಗೆ ಕೆಲ ದುಷ್ಕರ್ಮಿಗಳು ಡ್ರಗ್ಸ್ ಸರಬರಾಜು ಮಾಡುವ ಮೂಡಕ ದೇಶದ ಯುವಶಕ್ತಿಯನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಎಬಿವಿಪಿ ಆರೋಪಿಸಿದಲ್ಲದೆ, ಡ್ರಗ್ಸ್ ನಿರ್ಮೂಲನೆಗಾಗಿ ಸಹಿ ಸಂಗ್ರಹದ ಮೂಲಕ ಹೋರಾಟ ನಡೆಸುತ್ತಿದೆ.
ಇಡೀ ರಾಜ್ಯದಲ್ಲಿರುವ ಕಾಲೇಜುಗಳಲ್ಲಿ ಡ್ರಗ್ಸ್ ಸರಬರಾಜು ಮಾಡಿ ಯುವಶಕ್ತಿಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇಂದಿನ ಯುವಕರು ದೇಶದ ಅಭಿವೃದ್ಧಿಗೆ ಪೂರಕವಾಗಬೇಕು ಎಂಬುವ ಉದ್ದೇಶ ಹೊಂದಿದ್ದು, ಆದರೇ ಕೆಲ ದುಷ್ಟ ವ್ಯಕ್ತಿಗಳು ಡ್ರಗ್ಸ್ ನಂತಹ ಮಾಫಿಯಾವನ್ನು ಯುವಕರ ಮುಂದೆ ಇಟ್ಟು ಅಭಿವೃದ್ಧಿಗೆ ಮಾರಕವಾಗುವ ರೀತಿ ನಡೆದುಕೊಳ್ಳುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಲಾಯಿತು.
ಅಲ್ಲದೆ ಇಂತಹವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಎಬಿವಿಪಿ ವತಿಯಿಂದ ಸಾರ್ವಜನಿಕರ ಸಹಿ ಸಂಗ್ರಹದೊಂದಿಗೆ ಹೋರಾಟ ಮಾಡುತ್ತಿರುವುದಾಗಿ ಎಬಿವಿಪಿ ಜಿಲ್ಲಾಧ್ಯಕ್ಷ ಬೊಮ್ಮಣ್ಣ ತಿಳಿಸಿದರು.