ಹಾಸನ:ನಗರದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಉದ್ಯಾನವನದಲ್ಲಿ (ಎಬಿವಿಪಿ) ವಿದ್ಯಾರ್ಥಿ ಪರಿಷತ್ ಭಾನುವಾರ ಬೆಳಗ್ಗೆ ಸ್ವಚ್ಛತೆ ಕಾರ್ಯಕ್ರಮ ನಡೆಸಿದೆ.
ಫೀಲ್ಡ್ ಮಾರ್ಷಲ್ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ - ಫೀಲ್ಡ್ ಮಾರ್ಷಲ್ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ
ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡದಂತೆ ಜಾಗೃತಿ ಮೂಡಿಸಲು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.

ಪ್ಲಾಸ್ಟಿಕ್ ಫ್ರೀ ಇಂಡಿಯಾ ಎಂಬುದನ್ನು ಮಾಡಿದ್ದರೂ ಈ ಪಾರ್ಕಿನಲ್ಲಿ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದನ್ನೆಲ್ಲಾ ಒಂದು ಕಡೆ ಸಂಗ್ರಹಿಸಿ, ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿ ಪರಿಷತ್ ಈ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ. ಅಲ್ಲದೇ ಎಬಿವಿಪಿ ಕಡೆಯಿಂದ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಫ್ರೀ ಕ್ಯಾಂಪೇನ್ ಅನ್ನು ಮಾಡುವುದಾಗಿ ವಿದ್ಯಾರ್ಥಿ ಪರಿಷತ್ನ ಸಂಘಟನಾ ಕಾರ್ಯದರ್ಶಿ ಬೊಮ್ಮಣ್ಣ ತಿಳಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರಾದ ಭರತ್, ಮನು, ಸಂಪತ್ ಚವನ್, ನವೀನ್ ಕುಮಾರ್, ಭಾನುಪ್ರಕಾಶ್, ದರ್ಶನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.