ಅರಕಲಗೂಡು (ಹಾಸನ): ಮಾರ್ಗದ ಅರ್ಧದಲ್ಲೇ ಆ್ಯಂಬುಲೆನ್ಸ್ ಕೈಕೊಟ್ಟು ರೋಗಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟ ಘಟನೆ, ಅರಕಲಗೂಡುತಾಲೂಕಿನ ದುಮ್ಮಿಕೊಪ್ಪಲಿನಲ್ಲಿ ನಡೆದಿದೆ.
ಅರ್ಧದಲ್ಲೇ ಕೈಕೊಟ್ಟ ಆ್ಯಂಬುಲೆನ್ಸ್: ಸಕಾಲದಲ್ಲಿ ಚಿಕಿತ್ಸೆ ಸಿಗದೆ ವ್ಯಕ್ತಿ ಮೃತ..! - abmulence problem in hassan
ಅಸ್ವಸ್ಥ ರೋಗಿಯನ್ನು ಕರೆದೊಯ್ಯಲು ಗ್ರಾಮಕ್ಕೆ ಬಂದಿದ್ದ ಆ್ಯಂಬುಲೆನ್ಸ್ ಕೆಟ್ಟು ನಿಂತಿದ್ದು, ಗಂಟೆ ಗಟ್ಟಲೆ ರಸ್ತೆ ಬದಿ ಮಲಗಿ ರೋಗಿ ಕಾಯುತ್ತ ಇದ್ದರೂ ಬದಲಿ ಆಂಬುಲೆನ್ಸ್ ಬರಲಿಲ್ಲ.
ಸಕಾಲದಲ್ಲಿ ಚಿಕಿತ್ಸೆ ಸಿಗದೆ ವ್ಯಕ್ತಿ ಮೃತ
ಗ್ರಾಮದ ರಾಮೇಗೌಡ (60) ಎಂಬುವವರು ಮೃತಪಟ್ಟವರಾಗಿದ್ದು, ಅಸ್ವಸ್ಥ ರೋಗಿಯನ್ನು ಕರೆದೊಯ್ಯಲು ದುಮ್ಮಿಕೊಪ್ಪಲು ಗ್ರಾಮಕ್ಕೆ ಬಂದಿದ್ದ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ. ಗಂಟೆ ಗಟ್ಟಲೆ ರಸ್ತೆ ಬದಿ ಮಲಗಿ ರೋಗಿ ಕಾಯುತ್ತ ಇದ್ದರೂ ಬದಲಿ ಆಂಬುಲೆನ್ಸ್ ಬರಲಿಲ್ಲ.
ಆರೋಗ್ಯ ಸಹಾಯವಾಣಿಗೆ ಕರೆ ಮಾಡಿದ್ರೂ ಆರೋಗ್ಯ ಇಲಾಖೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಕೊರೊನಾ ಎಮರ್ಜೆನ್ಸಿ ವೇಳೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.