ಕರ್ನಾಟಕ

karnataka

ETV Bharat / state

ಹಾಸನ: ಕೈಕೊಟ್ಟ ಲವರ್​ ಮನೆಯ ಮುಂದೆ ವಿಷ ಸೇವಿಸಿದ್ದ ಯುವಕ ಸಾವು - ಪ್ರೇಮ ವೈಫಲ್ಯದಿಂದ ಯುವಕ ಆತ್ಮಹತ್ಯೆ

ಕುಟುಂಬಸ್ಥರು ತಮ್ಮ ಮಗಳ ಪ್ರೇಮವನ್ನು ನಿರಾಕರಿಸಿ ಮದುವೆಗೆ ಒಪ್ಪದ ಕಾರಣ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

young man committed suicide in Hassan, young man committed suicide over love failure, Hassan crime news, ಹಾಸನದಲ್ಲಿ ಯುವಕ ಆತ್ಮಹತ್ಯೆ, ಪ್ರೇಮ ವೈಫಲ್ಯದಿಂದ ಯುವಕ ಆತ್ಮಹತ್ಯೆ, ಹಾಸನ ಅಪರಾಧ ಸುದ್ದಿ,
ಕೈಕೊಟ್ಟ ಲವರ್​ ಮನೆಯ ಮುಂದೆನೇ ವಿಷ ಸೇವಿಸಿ ಪ್ರಾಣ ಬಿಟ್ಟ ಯುವಕ

By

Published : Jun 2, 2022, 7:15 AM IST

ಹಾಸನ:ಯುವತಿ ಕುಟುಂಬಸ್ಥರು ಮದುವೆ ನಿರಾಕರಿಸಿದ್ದಕ್ಕೆ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ನಡೆದಿದೆ. ದುರಂತ ಅಂತ್ಯ ಕಂಡ ಇವರ ಲವ್‌ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮದ ಅನಿಲ್ (24) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ. ಈತನ ಸ್ನೇಹಿತರು ಅನಿಲ್ ಪ್ರೇಯಸಿ ಮತ್ತು ಕುಟುಂಬಸ್ಥರ ಫೋಟೋಗಳನ್ನು ವೈರಲ್ ಮಾಡಿದ್ದಾರೆ.

ಏನಿದು ಪ್ರಕರಣ: ಅನಿಲ್ ತಮ್ಮ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಸುಮಾರು ಐದಾರು ವರ್ಷಗಳ ಕಾಲ ಇಬ್ಬರು ಲವ್​ನಲ್ಲಿದ್ದರು. ಈ ವಿಚಾರ ಯುವತಿಯ ಪೋಷಕರಿಗೆ ಗೊತ್ತಾಗಿದೆ. ಹೀಗಾಗಿ ತಮ್ಮ ಮಗಳನ್ನು ಹೊರಗೆ ಹೋಗದಂತೆ ಆಕೆಯ ಪೋಷಕರು ಕೂಡಿಹಾಕಿದ್ರು ಎನ್ನಲಾಗ್ತಿದೆ.

ಓದಿ:ತುಮಕೂರು: ಯುವತಿ-ಯುವತಿ ಮಧ್ಯೆ ಲವ್, ಓಡಿ ಹೋಗಿದ್ದ ಜೋಡಿ; ಮರಳಿ ಬಂದು ಮದುವೆಯಾಗುವಾಗ..?

ಈ ವಿಷಯ ತಿಳಿದು ಹುಡುಗ ತನ್ನ ಲವರ್​ ಮನೆ ಬಳಿ ಹೋದ್ರು ಹುಡುಗಿ ಕ್ಯಾರೇ ಎಂದಿಲ್ಲ. ಅಷ್ಟೇ ಅಲ್ಲ, ಆಕೆಯ ಪೋಷಕರು ಸಹ ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಅನಿಲ್ ಶುಕ್ರವಾರ ಬೆಳಗ್ಗೆ ಯುವತಿ ಮನೆಯ ಮುಂದೆನೇ ವಿಷ ಕುಡಿದಿದ್ದಾನೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಅನಿಲ್​ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಮೃತನ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಯುವತಿ ಹಾಗೂ ಆಕೆಯ ಪೋಷಕರ ವಿರುದ್ಧ ಪೋಸ್ಟರ್​ ಹರಿಬಿಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕರಣ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details