ಹಾಸನ: ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಮಾತ್ರೆಗಳಲ್ಲಿ ಪ್ಲಾಸ್ಟಿಕ್ ಕಾರಕ ಅಂಶವಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಮಾತ್ರೆಯಲ್ಲಿ ಪ್ಲಾಸ್ಟಿಕ್ ಕಾರಕ ಅಂಶ ತನಿಖೆಗೆ ಆದೇಶ ತಾಲೂಕಿನ ಬಾಳ್ಳುಪೇಟೆಯ ನಿವಾಸಿ ಸಕೀನಾ ಎಂಬ ಮಹಿಳೆಗೆ ಕಳೆದ 5 ವರ್ಷಗಳ ಹಿಂದೆ ಸಕ್ಕರೆ ಕಾಯಿಲೆ (ಶುಗರ್) ಹಾಗೂ ರಕ್ತದೊತ್ತಡ (ಬಿಪಿ) ಗೆ ಒಳಗಾಗಿದ್ದರು. ಸಕಲೇಶಪುರದ ಖಾಸಗಿ ಆಸ್ಪತ್ರೆಯ ಲೀಲಾವತಿ ಎಂಬ ವೈದ್ಯರು ಬರೆದುಕೊಟ್ಟಿದ್ದ ಮಾತ್ರೆಯನ್ನ ಬಾಳ್ಳುಪೇಟೆಯ ಗಣೇಶ್ ಮೆಡಿಕಲ್ನಲ್ಲಿ ಖರೀದಿಸಿದ್ರು.
ಮಾತ್ರೆಯನ್ನ ತಿಂದ 24 ಗಂಟೆಯಲ್ಲಿ ದೇಹದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಉಲ್ಬಣಿಸಲು ಶುರುವಾಯ್ತು. ಬಳಿಕ ಮತ್ತೊಂದು ಅರ್ಧ ಮಾತ್ರೆಯನ್ನ ಸೇವಿಸಲು ಮುಂದಾದಾಗ ಮಾತ್ರೆಯನ್ನ ಮುರಿಯಲು ಸಾಧ್ಯವಾಗದೇ ಇದ್ದ ಹಿನ್ನಲೆಯಲ್ಲಿ ಮಾತ್ರೆಯನ್ನ ನೀರಿನಲ್ಲಿ ಹಾಕಿ ನೋಡಿದಾಗ ಮಾತ್ರೆಯ ಮೇಲ್ಪದರಿನಿಂದ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದ್ದು, ಬಳಿಕ ಈ ವಿಚಾರವನ್ನ ಗಣೇಶ್ ಮೆಡಿಕಲ್ ಮಾಲೀಕ ವೆಂಕಟೇಶ್ ಗಮನಕ್ಕೂ ತಂದಿದ್ದು, ಈ ಪ್ರಕರಣದ ಬಗ್ಗೆ ಮಾಲೀಕ ನಿರ್ಲಕ್ಷ್ಯತನ ತೋರಿದ್ದರಿಂದ ಸಕೀನಾ ಎಂಬ ಮಹಿಳಾ ರೋಗಿ ಸದ್ಯ ಇದ್ರ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಮನುಷ್ಯನಿಗೆ ಮಾರಕವಾಗುವಂತಹ ಇಂತಹ ನಕಲಿ ಮಾತ್ರೆಗಳನ್ನ ತಯಾರಿಸುವ ಕಂಪನಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂಬುದು ಸಕೀನಾ ಅವರು ಆಗ್ರಹಿಸಿದ್ದಾರೆ.