ಹಾಸನ :ಅಂಬರೀಶ್ ಎಂಬುವರು ಆನ್ಲೈನ್ನಲ್ಲಿ ಸಾಲ ಪಡೆದಿದ್ದರು. ಆ ಸಾಲವನ್ನು ಮರುಪಾವತಿಸದಿರೋದಕ್ಕೆ ಕಂಪನಿಯವರು ಅವರ ಫೇಸ್ಬುಕ್ ಅಕೌಂಟ್ನನ್ನು ಹ್ಯಾಕ್ ಮಾಡಿ, ಅಶ್ಲೀಲ ಸಂದೇಶವನ್ನು ಎಲ್ಲರಿಗೂ ಕಳುಹಿಸಿದ್ದಾರೆ. ಇದರಿಂದ ಅಪಮಾನಗೊಂಡ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.
ಹಾಸನ ನಗರದ ಉದಯಗಿರಿ ಬಡಾವಣೆಯ ಅಂಬರೀಶ್ ಕೆ. ಸಿ. (39) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದ ಮೃತ ಅಂಬರೀಶ್, ವ್ಯಾಪಾರಕ್ಕಾಗಿ ಆನ್ಲೈನ್ನಲ್ಲಿ ಸಾಲ ಪಡೆದಿದ್ದರು.
ಈ ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡುತ್ತಿದ್ದರು. ಕೋವಿಡ್-19 ಹಿನ್ನೆಲೆ ಕೆಲ ತಿಂಗಳಿನಿಂದ ಸಾಲ ಕಟ್ಟಲು ಆಗಿರಲಿಲ್ಲ. ಹಾಗಾಗಿ, ಸಾಲಕ್ಕೆ ದುಬಾರಿ ಬಡ್ಡಿ ವಿಧಿಸಲಾಗಿತ್ತು.