ಕರ್ನಾಟಕ

karnataka

ETV Bharat / state

ಧ್ವನಿ ಮುದ್ರಿತ ಆಡಿಯೋ ಪ್ರೀತಂ ಗೌಡದ್ದಲ್ಲ: ಎ.ಮಂಜು ಸ್ಪಷ್ಟನೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಧ್ವನಿ ಮುದ್ರಿತ ಆಡಿಯೋ ಪ್ರೀತಂ ಗೌಡ ಅವರ ಮಾತಲ್ಲ. ಆಡಿಯೋದಲ್ಲಿರುವ ಮಾತುಗಳು ಸತ್ಯಕ್ಕೆ ದೂರವಾದವು ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಪ್ರತಿಕ್ರಿಯೆ ನೀಡಿದರು.

ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು

By

Published : Apr 9, 2019, 7:20 PM IST

ಹಾಸನ: ಶಾಸಕ ಪ್ರೀತಂ ಗೌಡ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು

ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಧ್ವನಿ ಮುದ್ರಿತ ಆಡಿಯೋದಲ್ಲಿರುವುದು ಪ್ರೀತಂ ಗೌಡ ಅವರ ಮಾತಲ್ಲ. ಆಡಿಯೋದಲ್ಲಿರುವ ಮಾತುಗಳು ಸತ್ಯಕ್ಕೆ ದೂರವಾದವು. ಇದು ಜೆಡಿಎಸ್ ಪಕ್ಷದ ಕುತಂತ್ರ ಅಷ್ಟೇ. ಯಾವುದೇ ಪಕ್ಷದಲ್ಲಿ ಇದ್ದರೂ ಕೂಡ ನಾನು ನಿಷ್ಠಾವಂತನಾಗಿಯೇ ಇರುತ್ತೇನೆ ಎಂದರು.

ನಾನು ರಾಜಕಾರಣಿ ನಿಜ. ಯಾವುದೇ ಪಕ್ಷದಲ್ಲಿದ್ದರೂ ಕೂಡ ಪಕ್ಷಕ್ಕೆ ನಿಷ್ಠಾವಂತನಾಗಿರುತ್ತೇನೆಯೇ ಹೊರತು ಪಕ್ಷಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ. ಹಿಂದೆ ನಾನು ಬಿ.ಬಿ.ಶಿವಪ್ಪ ಅವರ ಅಡಿಯಲ್ಲಿ ಕೂಡ ಕೆಲಸ ಮಾಡಿದ್ದೇನೆ. ಕಾರಣಾಂತರಗಳಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಕಾಂಗ್ರೆಸ್ ಪಕ್ಷದಲ್ಲಿಯೂ ನಿಷ್ಠಾವಂತ ಕಾರ್ಯಕರ್ತನಾಗಿ ಇದ್ದೆ. ಪಕ್ಷದ ಕೆಲವು ಆಂತರಿಕ ಸಮಸ್ಯೆಗಳಿಂದ ನಾನು ಪಕ್ಷ ತೊರೆಯುವ ಅನಿವಾರ್ಯತೆ ಉಂಟಾದಾಗ ಮತ್ತೆ ಮಾತೃ ಪಕ್ಷಕ್ಕೆ ಮರಳಿ ಬಂದಿದ್ದೇನೆ.

ಕಾರ್ಯಕರ್ತರು ಇಂತಹ ಆಡಿಯೋ ಧ್ವನಿ ಸುರುಳಿಗಳಿಗೆ ಆವೇಶಕ್ಕೆ ಒಳಗಾಗಬಾರದು. ಇದೆಲ್ಲ ಜೆಡಿಎಸ್ ಪಕ್ಷದವರ ಕುತಂತ್ರ ರಾಜಕಾರಣವಷ್ಟೇ. ಈ ಚುನಾವಣೆ ಹಾಸನ ಶಾಸಕ ಪ್ರೀತಂ ಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನೇತೃತ್ವದಲ್ಲಿ ನಡಿತಾ ಇದೆ. ನಿಷ್ಪಕ್ಷಪಾತವಾಗಿ ನಾವು ಚುನಾವಣೆ ಎದುರಿಸಲು ಸಿದ್ಧವಾಗಿದ್ದೇವೆ ಅಂತ ಪ್ರತಿಕ್ರಿಯೆ ನೀಡಿದರು.

ABOUT THE AUTHOR

...view details