ಚಿಕ್ಕಮಗಳೂರು:ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಕಾರ್ಯಕರ್ತರೊಂದಿಗೆ ಇಂದು ಭರ್ಜರಿ ಪ್ರಚಾರ ನಡೆಸಿದರು. ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಅವರು ಖುದ್ದು ವಾಹನ ಚಾಲನೆ ಮಾಡುವ ಮೂಲಕ ಎ.ಮಂಜು ಅವರನ್ನು ಪ್ರತಿ ಹಳ್ಳಿ ಹಳ್ಳಿಗೆ ಕರದುಕೊಂಡು ಹೋಗಿ ಚುನಾವಣಾ ಪ್ರಚಾರ ನಡೆಸಿದರು.
ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಡದಿರಿ: ಎ.ಮಂಜು - news kannada
ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಕೊಡಬೇಡಿ. ಈ ಸಲ ಮತ್ತೊಮ್ಮೆ ಮೋದಿಯನ್ನು ಆಯ್ಕೆ ಮಾಡುವ ಮೂಲಕ ನನ್ನನ್ನೂ ಸಂಸತ್ಗೆ ಕಳುಹಿಸಿಕೊಡಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿದ ಎ.ಮಂಜು, ಮಲ್ಲೇಶ್ವರ, ವೈಮಲ್ಲಾಪುರ, ಯರದಗೆರೆ, ಚಟ್ಟಣಹಳ್ಳಿ, ಸಿಂಗಟಗೆರೆ, ಎಸ್. ಮಾದಾಪುರ, ಕೆ. ಬಿದರೆ, ಪಂಚನಹಳ್ಳಿ, ನೀಡುವಳ್ಳಿ, ಗಂಗನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಮತ್ತೊಮ್ಮೆ ಮೋದಿಯನ್ನು ಆಯ್ಕೆ ಮಾಡುವ ಮೂಲಕ ನನ್ನನ್ನೂ ಸಂಸತ್ಗೆ ಕಳುಹಿಸಿದರೆ ಜಿಲ್ಲೆ ಇನಷ್ಟು ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದರು. ಇನ್ನು ಶಾಸಕ ಬೆಳ್ಳಿ ಪ್ರಕಾಶ್ ಅವರೇ ವಾಹನ ಚಾಲನೆ ಮಾಡಿಕೊಂಡು ಎ.ಮಂಜು ಅವರನ್ನು ಪ್ರತಿ ಹಳ್ಳಿ ಹಳ್ಳಿಗೂ ಕರೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.