ಕರ್ನಾಟಕ

karnataka

ETV Bharat / state

ಕದಿಯಲು ಬಂದವನಿಗೆ ಮರ್ಮಾಂಗಕ್ಕೆ ಒದ್ದ ಹಸು... ಸ್ಥಳದಲ್ಲೇ ಹಾರಿಹೋಯ್ತು ವ್ಯಕ್ತಿ ಪ್ರಾಣ..! - undefined

ಜಾನುವಾರು ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ, ಹೆಣವಾಗಿದ್ದಾನೆ. ಹಸು ಆತನ ಮರ್ಮಾಂಗಕ್ಕೆ ಒದ್ದಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಹಾಸನ ಜಿಲ್ಲೆಯಲ್ಲಿ ಈ ನಡೆದಿದೆ.

ಜಾನುವಾರು ಕಳ್ಳತನ ಮಾಡಲು ಬಂದು.. ಹಸುವಿನಿಂದಲೇ ಪ್ರಾಣಬಿಟ್ಟ

By

Published : Jun 24, 2019, 12:20 PM IST


ಹಾಸನ:ಜಾನುವಾರು ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಒದ್ದು ಹಸುವೇ ಸಾಯಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಗೋವಿಂದಪ್ಪ (55) ಮೃತ ವ್ಯಕ್ತಿ. ಈತ ಹಸುವನ್ನು ಕದ್ದು ವಾಹನಕ್ಕೆ ಸಾಗಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮೃತನ ಶವ ಪತ್ತೆಯಾಗಿದೆ. ತೋಟದ ಮನೆಯಲ್ಲಿದ್ದ ಹಸುವನ್ನು ಗೋವಿಂದಪ್ಪ ಅಪಹರಿಸಿದ್ದ. ಅದನ್ನು ವಾಹನದಲ್ಲಿ ಸಾಗಿಸುತ್ತಾ ಎರಡು ಕಿಲೋ ಮೀಟರ್​ ಸಾಗಿದ್ದ. ನಿರ್ಜನ ಪ್ರದೇಶದಲ್ಲಿ ಹಸುವಿನ ಕಾಲು ಕಟ್ಟಿ ಹಾಕಿ ವಾಹನದಲ್ಲಿ ಸಾಗಿಸಲು ಮುಂದಾದಾಗ ಹಸು ಗೋವಿಂದಪ್ಪನ ಮರ್ಮಾಂಗಕ್ಕೆ ಒದ್ದಿದೆ. ಹಸು ಒದ್ದಿದ್ದಕ್ಕೆ ಗೋ ಕಳ್ಳ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಗೋವಿಂದಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details