ಹಾಸನ: ಪಾರ್ಟಿ ಮಾಡಲೆಂದು ಹೋಗಿದ್ದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ದೊಡ್ಡಪುರ ಗ್ರಾಮದಲ್ಲಿ ಜರುಗಿದೆ. ನವೀನ್ (25) ಸಾವಿಗೀಡಾದ ಯುವಕ. ಮೂಲತಃ ಈತ ಶಿವಮೊಗ್ಗ ಜಿಲ್ಲೆಯವನು ಎಂದು ಗುರುತಿಸಲಾಗಿದೆ.
ಹುಟ್ಟುಹಬ್ಬದ ದಿನ ಪಾರ್ಟಿ ಮಾಡಲು ಹೋಗಿ ಹೆಣವಾದ ಯುವಕ, ಕೊಲೆ ಶಂಕೆ - hassan news
ಹುಟ್ಟುಹಬ್ಬದ ದಿನ ನಿನ್ನೆ ನಾಲ್ಕು ಮಂದಿ ಜೊತೆಗೆ ಪಾರ್ಟಿ ಮಾಡಲು ದೊಡ್ಡಪುರ ಗ್ರಾಮದ ಬಾವಿಯ ಸಮೀಪ ಹೋಗಿದ್ದರು ಎನ್ನಲಾಗಿದೆ. ಪಾರ್ಟಿ ಮುಗಿದ ಬಳಿಕ ಸ್ನೇಹಿತರುಗಳ ನಡುವೆ ಜಗಳ ನಡೆದಿರಬಹುದು ಎಂದು ಹೇಳಲಾಗಿದೆ.
ಪಾರ್ಟಿ ಮಾಡಲು ಹೋದವ ಹೆಣವಾದ:
ಹುಟ್ಟುಹಬ್ಬದ ದಿನ ನಿನ್ನೆ ನಾಲ್ಕು ಮಂದಿ ಜೊತೆಗೆ ಪಾರ್ಟಿ ಮಾಡಲು ದೊಡ್ಡಪುರ ಗ್ರಾಮದ ಬಾವಿಯ ಸಮೀಪ ಹೋಗಿದ್ದರು ಎನ್ನಲಾಗಿದೆ. ಪಾರ್ಟಿ ಮುಗಿದ ಬಳಿಕ ಸ್ನೇಹಿತರುಗಳ ನಡುವೆ ಮನಸ್ತಾಪ ಉಂಟಾಗಿ ಜಗಳ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : May 31, 2020, 1:56 PM IST