ಹಾಸನ:ಮಾಜಿ ಪ್ರಧಾನಿ ದೇವೇಗೌಡರಂತಹ ನಾಯಕರು ದೆಹಲಿ ರಾಜಕಾರಣಕ್ಕೆ ಅತ್ಯವಶ್ಯಕವಾಗಿ ಬೇಕಿತ್ತು. ಆ ನಿಟ್ಟಿನಲ್ಲಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಎಪಿಎಂಸಿ ಅಧ್ಯಕ್ಷ ಕಣದಳ್ಳಿ ಮಂಜೇಗೌಡ ಹೇಳಿದ್ದಾರೆ.
ದೇವೇಗೌಡರಂತಹ ನಾಯಕ ದೆಹಲಿ ರಾಜಕಾರಣಕ್ಕೆ ಅತ್ಯವಶ್ಯಕ: ಕಣದಳ್ಳಿ ಮಂಜೇಗೌಡ - DeveGowda
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆ ಕಾರ್ಯಕರ್ತರು ಹಾಸನದ ಆಲೂರ ಪಟ್ಟಣದಲ್ಲಿರುವ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆ ಕಾರ್ಯಕರ್ತರು ಆಲೂರ ಪಟ್ಟಣದಲ್ಲಿರುವ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ರಾಜಕಾರಣದ ಆಳ-ಅಗಲವನ್ನ ಕಂಡವರು. ದೇಶದ ಮುಂದಾಳತ್ವ ಪಡೆದು ಭಾರತಕ್ಕೆ ಮತ್ತೊಂದು ಕೊಡುಗೆ ಕೊಡಲು ಅವರಂತ ರಾಜಕಾರಣಿ ಬೇಕು. ಆ ನಿಟ್ಟಿನಲ್ಲಿ ಅವರ ಅವಿರೋಧ ಆಯ್ಕೆ ನಮಗೆ ಹೆಚ್ಚು ಸಂತೊಷವನ್ನ ತಂದಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ಹಾಸನ ಜಿಲ್ಲೆಯ ಆಲೂರು ಪಟ್ಟಣದ ಬಸ್ ನಿಲ್ದಾಣದ ಆಟೋಸ್ಟ್ಯಾಂಡ್ ಬಳಿ ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.