ಕರ್ನಾಟಕ

karnataka

ETV Bharat / state

ದುಬೈನಿಂದ ಆಗಮಿಸಿದ್ದ ಯುವತಿಯನ್ನು ಬಸ್​ನಿಂದ ಕೆಳಗಿಳಿಸಿದ ಪ್ರಯಾಣಿಕರು - ದುಬೈನಿಂದ ಹಿಂತಿರುಗಿದ ಮಹಿಳೆ

ದುಬೈನಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅರಕಲಗೂಡು ಮಾರ್ಗವಾಗಿ ಯುವತಿ ಸೋಮವಾರಪೇಟೆಗೆ ಹೋಗುತ್ತಿದ್ದನ್ನು ಕಂಡು ಆತಂಕಗೊಂಡ ಸಾರ್ವಜನಿಕರು ಯುವತಿಯನ್ನು ಬಸ್‌ನಿಂದ ಇಳಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರಂಸಗ ನಡೆದಿದೆ.

A lady who returned from dubai was put out of bus
ದುಬೈನಿಂದ ಆಗಮಿಸಿದ್ದ ಯುವತಿಯನ್ನು ಬಸ್​ನಿಂದ ಇಳಿಸಿದ ಜನರು...ಕಾರಣ?

By

Published : Mar 21, 2020, 11:30 AM IST

ಹಾಸನ: ದುಬೈನಿಂದ ಆಗಮಿಸಿದ್ದ ಯುವತಿಯೊಬ್ಬಳು ಬಸ್‌ನಲ್ಲಿ ಸಂಚರಿಸುತ್ತಿರುವುದನ್ನು ನೋಡಿ ಆತಂಕಗೊಂಡ ಸಾರ್ವಜನಿಕರು ಯುವತಿಯನ್ನು ಬಸ್‌ನಿಂದಿಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ದುಬೈನಿಂದ ಬೆಂಗಳೂರಿಗೆ ಬಂದು, ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅರಕಲಗೂಡು ಮಾರ್ಗವಾಗಿ ಯುವತಿ ಸೋಮವಾರಪೇಟೆಗೆ ಹೋಗುತ್ತಿದ್ದಳು. ಯುವತಿಯ ಕೈ ಮೇಲೆ ಏರ್‌ಪೋರ್ಟ್‌ನಲ್ಲಿ ಹಾಕಲಾದ ಸೀಲ್ ಗಮನಿಸಿದ ಪ್ರಯಾಣಿಕರು ಆತಂಕಕ್ಕೆ ಒಳಗಾದರು.

ಈ ವೇಳೆ ಆಕೆಯನ್ನು ಪ್ರಶ್ನಿಸಿದ ಪ್ರಯಾಣಿಕರು, ಮನೆಯಲ್ಲೇ ಸ್ವಲ್ಪ ದಿನ ಎಚ್ಚರಿಕೆಯಿಂದ ಇರಬೇಕಾದ ನೀವು ಏಕೆ ಬಸ್‌ನಲ್ಲಿ ಓಡಾಡುತ್ತಿದ್ದೀರಿ? ಎಂದು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಈ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದಾರೆ.

ತಕ್ಷಣ ಅರಕಲಗೂಡು ಬಸ್ ನಿಲ್ದಾಣಕ್ಕೆ ಬಂದ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ವೇಳೆ ಯುವತಿ ನನಗೆ ಏರ್‌ಪೋರ್ಟ್‌ನಲ್ಲಿ ಚೆಕ್ ಮಾಡಿ ನೆಗೆಟಿವ್ ಇದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾಳೆ. ಬಳಿಕ ಯುವತಿಯನ್ನು ಜೊತೆಯಲ್ಲೇ ಕರೆದುಕೊಂಡು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳು, ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ, ಮನೆಯಿಂದ ಸ್ವಲ್ಪ ದಿನ ಹೊರಗೆ ಓಡಾಡದಂತೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details