ಕರ್ನಾಟಕ

karnataka

ETV Bharat / state

ಲಗ್ನ ಪತ್ರಿಕೆಯಲ್ಲಿ ಸಂಸದ ಪ್ರಜ್ವಲ್​​ ರೇವಣ್ಣ ಎಂದು ಮುದ್ರಿಸಿದ ವರ! - undefined

ಫಲಿತಾಂಶ ಬರುವ ಮುನ್ನವೇ ಸಂಸದ ಎನಿಸಿಕೊಂಡ ಪ್ರಜ್ವಲ್ ರೇವಣ್ಣ- ಲಗ್ನ ಪತ್ರಿಕೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಎಂದು ಮುದ್ರಿಸಿದ ಫ್ಯಾನ್​- ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಂಸದ ಪ್ರಜ್ವಲ್ ರೇವಣ್ಣ ಎಂದು ಮುದ್ರಿಸಿದ ವರ

By

Published : May 9, 2019, 8:18 PM IST

ಹಾಸನ:ಲೋಕಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನ ಅಭಿಮಾನಿಯೊಬ್ಬ, ಸಂಸದ ಪ್ರಜ್ವಲ್ ರೇವಣ್ಣ ಎಂದು ಬಳಸಿ ತನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿರುವ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲ್ಸಿದ್ರು ಎನ್ನುವಂತಿದೆ ಇವನ ಕೆಲಸ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆದು 20 ದಿನಗಳು ಕೂಡ ಕಳೆದಿಲ್ಲ. ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನನ್ನು ಸಂಸದ ಎಂದು ಲಗ್ನ ಪತ್ರಿಕೆಯಲ್ಲಿ ಬರೆಸಿದ್ದಾನೆ.

ಇನ್ನು ಲಗ್ನ ಪತ್ರಿಕೆಯನ್ನು ಮುದ್ರಣ ಮಾಡಲು ಖಾಸಗಿ ಮುದ್ರಣಕ್ಕೆ ಕೊಟ್ಟ ವೇಳೆ ಈ ಬಗ್ಗೆ ಪ್ರಮಾದವಾಗಿದೆ ಎಂದು ವರ ತಿಳಿಸಿದ್ದಾನೆ. ಇನ್ನು ಈತನ ಮದುವೆ ಜೂನ್ 27ರಂದು ಜರುಗಲಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

For All Latest Updates

TAGGED:

ABOUT THE AUTHOR

...view details