ಕರ್ನಾಟಕ

karnataka

By

Published : Apr 28, 2019, 9:38 AM IST

ETV Bharat / state

ಬಡತನದ ವಿರುದ್ಧ ಬ್ಯಾಟಿಂಗ್​... ಕ್ರಿಕೆಟ್​ಅನ್ನೇ ನಂಬಿ ಬದುಕುತ್ತಿದೆ ಈ ಕುಟುಂಬ

ಕ್ರಿಕೆಟ್​​ನ ಗಂಧ ಗಾಳಿ ತಿಳಿಯದ ಕುಟುಂಬವೊಂದು ಕ್ರಿಕೆಟ್​​ ಬ್ಯಾಟ್​​ ತಯಾರಿಸಿ ಅದರಲ್ಲೇ ಜೀವನ ಕಟ್ಟಿಕೊಂಡಂತಹ ಘಟನೆ ಹಾಸನದಲ್ಲಿ ನಡೆದಿದೆ.

ಕುಟುಂಬದಿಂದ ಕ್ರಿಕೆಟ್​​​ ಬ್ಯಾಟ್​ ತಯಾರಿಕೆ

ಹಾಸನ: ಮಹಾರಾಷ್ಟ್ರದಿಂದ ಹಾಸನಕ್ಕೆ ಬಂದ ಕುಟುಂಬವೊಂದು ಬಿಎಂ ರಸ್ತೆಯ ಸರ್ಕಾರಿ ಇಂಜಿನಿಯರ್​​ ಕಾಲೇಜು ಮುಂಭಾಗ ತಾತ್ಕಾಲಿಕವಾಗಿ ಟೆಂಟನ್ನು ನಿರ್ಮಿಸಿ ಅಲ್ಲಿಯೇ ವಾಸವಿದ್ದು, ಕ್ರಿಕೆಟ್​​ ಬ್ಯಾಟ್​​ನನ್ನು ತಯಾರಿಸಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಇನ್ನು ಈ ಬ್ಯಾಟ್​​ ತಯಾರಿಕೆಗೆ ಬೇಕಾಗುವಂತಹ ಕಟ್ಟಿಗೆಯನ್ನು ದಾವಣಗೆರೆ ಸೇರಿದಂತೆ ಇನ್ನೀತರ ಭಾಗಗಳಿಂದ ತರಿಸಿಕೊಂಡು ದಿನಕ್ಕೆ ಸುಮಾರು15ರಿಂದ 20 ಕ್ರಿಕೆಟ್​​ ಬ್ಯಾಟ್​ ಮತ್ತು ವಿಕೆಟ್ಸ್​​​, ಸ್ಟಮ್ಸ್​​ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಪುರುಷರು ಬ್ಯಾಟ್ ತಯಾರಿಸಿದರೆ ಮಹಿಳೆಯರು ಕೂಡ ವಿಕೆಟ್​​​ಗಳನ್ನು ತಯಾರಿಸುವ ಕೆಲಸದಲ್ಲಿ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲ ಬ್ಯಾಟ್ ತಯಾರಾದ ಬಳಿಕ ವಿವಿಧ ಕಂಪನಿಯ ಸ್ಟಿಕ್ಕರ್​​ಗಳನ್ನು ಹಾಕುವ ಮೂಲಕ ನೋಡುಗರನ್ನು ಆಕರ್ಷಿಸುವಂತೆ ಮಾಡುತ್ತಿದ್ದಾರೆ.

ಕುಟುಂಬದಿಂದ ಕ್ರಿಕೆಟ್​​​ ಬ್ಯಾಟ್​ ತಯಾರಿಕೆ

ಅವರು ಹೇಳುವ ಪ್ರಕಾರ ಪ್ರತಿನಿತ್ಯ ಸುಮಾರು ಹತ್ತರಿಂದ ಹದಿನೈದು ಭಾಗಗಳನ್ನು ತಯಾರಿಸುತ್ತಾರಂತೆ. ಆದರೆ ಇದು ಗ್ರಾಹಕರಿಗೆ ಗೊತ್ತಾಗಲ್ಲ. ನಮಗೆ ಒಂದು ತಯಾರಿಸಲು ಸುಮಾರು180 ರಿಂದ 200 ರೂಪಾಯಿ ವೆಚ್ಚ ತಗಲುತ್ತದೆ. ಆದರೆ ನಾವು 100 ರಿಂದ 120 ರೂಪಾಯಿ ಲಾಭವನ್ನು ಇಟ್ಟು ಮಾರಾಟ ಮಾಡುತ್ತೇವೆ. ಕೆಲವರು ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕೊಡದೆ ಅತಿ ಕಡಿಮೆ ಬೆಲೆಗೆ ಕೇಳ್ತಾರೆ. ನಾವು ಅರ್ಧದಷ್ಟಾದರೂ ಲಾಭ ಕೊಡಿ ಅಂತ ಕೇಳಿದರೆ ನಮಗೆ ಬ್ಯಾಟ್​ ಬೇಡ ಅಂತ ಹೇಳಿ ವಾಪಸ್ ಹೋಗ್ತಾರಂತೆ.

ತಮ್ಮಲ್ಲಿನ ಕಲೆಯನ್ನೇ ಬಂಡವಾಳ ಮಾಡಿಕೊಂಡು ಈ ಮಹಾರಾಷ್ಟ್ರದ ಸ್ಟಾಕಿಂಗ್ ಸಮಾಜ ಕ್ರಿಕೆಟ್ ಬ್ಯಾಟಿಂಗ್ ತಯಾರು ಮಾಡುವುದರಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಆದರೆ ಇಂತಹ ಬಡ ಕುಟುಂಬಗಳನ್ನು ಸರ್ಕಾರ ಗುರುತಿಸಿ ಇವರ ಕಲೆಗೆ ಯಾವುದಾದರೂ ರೀತಿಯಲ್ಲಿ ಬೆಲೆ ನೀಡಿದರೆ ನಿಜಕ್ಕೂ ಇವರ ಬಾಳು ಬಂಗಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

For All Latest Updates

TAGGED:

ABOUT THE AUTHOR

...view details