ಹಾಸನ:ಅವರಿಬ್ಬರು ಸ್ಪುರದ್ರೂಪಿ ಯುವಕ ಯುವತಿ, ಇಬ್ಬರು ಉನ್ನತ ವ್ಯಾಸಂಗ ಮಾಡಿದ್ದಾರೆ. ಆದರೆ ಇಬ್ಬರಿಗೂ ಕೊರತೆಯೊಂದಿತ್ತು. ಅದೇ ಮಾತು... ಹೌದು, ಮಾತು ಬಾರದ ಮೂಕ ಜೋಡಿಯೊಂದು ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಬಾಳು ನಡೆಸಲು ಸಜ್ಜಾಗಿದ್ದಾರೆ.
ಹಾಸನದಲ್ಲಿ ನಡೆಯಿತು ವಿಶೇಷ ಮದುವೆ ನಿಶ್ಚತಾರ್ಥ...! - ಚಾಮರಾಜನಗರ ಜಿಲ್ಲೆ ರಾಮನಾಥಪುರ ಗ್ರಾಮ
ಹಾಸನ ಜಿಲ್ಲೆಯಲ್ಲೊಂದು ವಿಶೇಷ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ವಿದ್ಯಾವಂತ ಆದರೆ ಮಾತು ಬಾರದ ಜೋಡಿಯಂದು ಸಾಂಸಾರಿಕ ಜೀವನಕ್ಕೆ ಮುನ್ನುಡಿ ಬರೆಯಿತು.
ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದ ಕೃಷ್ಣೇಗೌಡರ ಪುತ್ರಿ ಸುಪ್ರಿಯಾ, ಬಿ.ಕಾಂ ಪದವಿಧರೆಯಾಗಿದ್ದು, ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ನಡೆಸಿದ್ದರು. ಆದರೆ ಮಾತು ಬಾರದ ಕಾರಣ ಈಕೆ ಮದುವೆಗೆ ಒಪ್ಪಿರಲಿಲ್ಲ. ತಮಗಿರುವ ಸಮಸ್ಯೆ ಬೇರೆಯವರಿಗೆ ಹೊರೆಯಾಗಬಾರದು ಎಂಬುದು ಇದಕ್ಕೆ ಕಾರಣ. ಕೊನೆಗೆ ಪೋಷಕರ ಒತ್ತಾಯಕ್ಕೆ ಮಣಿದು ಕಂಡೀಷನ್ ಹಾಕಿ ವಿವಾಹಕ್ಕೆ ಸಜ್ಜಾದರು ಸುಪ್ರಿಯಾ.
ಬಳಿಕ ಮ್ಯಾಟ್ರಿಮೊನಿಯಲ್ಲಿ ರಿಜಿಸ್ಟ್ರೆಡ್ ಮಾಡಿಕೊಂಡ ಇವರಿಗೆ ತಮ್ಮಂತೇ ಮಾತು ಬಾರದ ಹುಡುಗ ಸಿಕ್ಕಿದ್ದಾನೆ. ಚಾಮರಾಜನಗರ ಜಿಲ್ಲೆ ರಾಮನಾಥಪುರ ಗ್ರಾಮ ನಿವಾಸಿ ಪ್ರಜ್ವಲ್ ಎಂಬಾತ ಬಿ.ಟೆಕ್ ಪದವಿಧರನಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಈತನಿಗೂ ಮಾತು ಬಾರದು. ಹೀಗಾಗಿ ಇಬ್ಬರು ಪರಸ್ಪರ ಒಪ್ಪಿಕೊಂಡು ಬಾಳೋದಿಕೆ ಸಿದ್ಧವಾಗಿದ್ದು, ಹೊಳೆನರಸೀಪುರ ಪಟ್ಟಣದ ಪಿಆರ್ ಕಲ್ಯಾಣ ಮಂಟಪದಲ್ಲಿ ಇಬ್ಬರ ಮದುವೆಗೆ ಮುನ್ನುಡಿ ಇಟ್ಟಿದ್ದಾರೆ.