ಹಾಸನ :ಕೊರೊನಾ ಸಂಕಷ್ಟದಲ್ಲಿ ಆಹಾರ ನೀಡಲು, ತಾನು ಕೂಡಿಟ್ಟಿದ್ದ ಹಣವನ್ನು ಆರ್ಎಸ್ಎಸ್ ಸಂಘಟನೆಯ ಸ್ವಯಂ ಸೇವಕರಿಗೆ ನೀಡುವ ಮೂಲಕ ಬಾಲಕನೊಬ್ಬ ಮಾನವೀಯತೆ ಮೆರೆದಿದ್ದಾನೆ.
ಕೂಡಿಟ್ಟ ಹಣವನ್ನು RSS ಉಚಿತ ಆಹಾರ ಸೇವೆಗೆ ನೀಡಿದ ಹಾಸನದ ಪೋರ - boy help money for food
ತನ್ನ ತಂದೆ-ತಾಯಿ ನೀಡಿದ್ದ ಹಣವನ್ನು ಗೋಲಕದಲ್ಲಿ ಸಂಗ್ರಹಿಸಿಟ್ಟಿದ್ದ ಬಾಲಕ, ಅದನ್ನು ಒಡೆದು ಸುಮಾರು ಎರಡು ಸಾವಿರ ರೂಪಾಯಿನಷ್ಟು ಹಣವನ್ನು ಸ್ವಯಂ ಸೇವಕರಿಗೆ ನೀಡಿದ್ದಾನೆ. ತಾವು ಮಾಡುತ್ತಿರುವ ಸೇವೆಗೆ ತನ್ನ ಹಣವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾನೆ. ಬಾಲಕನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕಬಿಳ್ತಿ ಗ್ರಾಮದ ಹರ್ಷಿತ್ ಗೌಡ ಧನ ಸಹಾಯ ಮಾಡಿದ ಬಾಲಕ. ಚನ್ನರಾಯಪಟ್ಟಣ ತಾಲೂಕಿನ ಹಲವೆಡೆ ಆರ್ಎಸ್ಎಸ್ನವರು ಉಚಿತವಾಗಿ ಆಹಾರ ನೀಡುತ್ತಿದ್ದರು. ಈ ಬಗ್ಗೆ ತಿಳಿದು ತನ್ನ ಕೈಲಾದ ಧನ ಸಹಾಯ ಮಾಡಲು ಮುಂದಾಗಿದ್ದಾನೆ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಹರ್ಷಿತ್.
ಹೀಗಾಗಿ, ತನ್ನ ತಂದೆ-ತಾಯಿ ನೀಡಿದ್ದ ಹಣವನ್ನು ಗೋಲಕದಲ್ಲಿ ಸಂಗ್ರಹಿಸಿಟ್ಟಿದ್ದ ಬಾಲಕ, ಅದನ್ನು ಒಡೆದು ಸುಮಾರು ಎರಡು ಸಾವಿರ ರೂಪಾಯಿನಷ್ಟು ಹಣವನ್ನು ಸ್ವಯಂ ಸೇವಕರಿಗೆ ನೀಡಿದ್ದಾನೆ. ತಾವು ಮಾಡುತ್ತಿರುವ ಸೇವೆಗೆ ತನ್ನ ಹಣವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾನೆ. ಬಾಲಕನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.