ಹಾಸನ:ಯುವಕನೊಬ್ಬ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ನಗರದ ಅರಳೇಪೇಟೆ ರಸ್ತೆಯಲ್ಲಿ ನಡೆದಿದೆ.
ಬಿಹಾರ ಮೂಲದವನು ಎನ್ನಲಾದ ಯುವಕನೊಬ್ಬ ಮನೆಗೆ ನುಗ್ಗಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕೊಲೆಗೆ ಯತ್ನಿಸಿದ್ದು, ಸಾರ್ವಜನಿಕರು ಹಿಗ್ಗಾಮುಗ್ಗಾ ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾರೆ.
ಏಕಾಏಕಿ ಮನೆಗೆ ನುಗ್ಗಿ ಮಹಿಳೆ ಕೊಲೆಗೆ ಯತ್ನ... ಆರೋಪಿಗೆ ಹಿಗ್ಗಾಮುಗ್ಗಾ ಥಳಿತ! - ಹಾಸನದಲ್ಲಿ ಯುವಕನಿಂದ ಮಹಿಳೆ ಕೊಲೆ ಯತ್ನ ಸುದ್ದಿ
ಯುವಕನೊಬ್ಬ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ನಗರದ ಅರಳೇಪೇಟೆ ರಸ್ತೆಯಲ್ಲಿ ನಡೆದಿದೆ.
ಅರಳೇಪೇಟೆ ರಸ್ತೆಯ ನಿವಾಸಿ ಮಂಜುಳಾ ಬಾಯಿ ಎಂಬುವರ ಮನೆಗೆ ಹಿಂಬಾಗಿಲಿನಿಂದ ಬಂದ ಆರೋಪಿ ಮನೆಯ ಬೀರು ತೆಗೆದು ಅಲ್ಲಿದ್ದ ವಸ್ತುಗಳನ್ನ ಚಲ್ಲಾಪಿಲ್ಲಿ ಮಾಡಿದ್ದಾನೆ. ಒಳಗಿನಿಂದ ಬಂದ ಶಬ್ದ ಏನೆಂಬುದನ್ನು ಗಮನಿಸಲು ಮುಂದಾದಾಗ ಆತ ಮಂಜುಳಾ ಬಾಯಿ, ಕುತ್ತಿಗೆಗೆ ಕೈ ಹಾಕಿ ಕೊಲೆ ಮಾಡಲು ಪ್ರಯತ್ನಪಟ್ಟಿದ್ದಾನೆ. ಈ ವೇಳೆ ಪ್ರತಿರೋಧ ಒಡ್ಡಿ ಆಕೆ ಕಿರುಚಿಕೊಂಡಾಗ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.