ಕರ್ನಾಟಕ

karnataka

ETV Bharat / state

ಒಂದೇ ತಿಂಗಳಲ್ಲಿ 9 ಕೊಲೆ ಪ್ರಕರಣ: ಬೆಚ್ಚಿಬಿದ್ದ ಹಾಸನ ಜಿಲ್ಲೆಯ ಜನತೆ! - ಹಾನದಲ್ಲಿ ಅತ್ಯಾಚಾರ ಪ್ರಕರಣ

ಹಾಸನ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳೆದ ಒಂದು ತಿಂಗಳಲ್ಲಿ 9ಕ್ಕೂ ಅಧಿಕ ಕೊಲೆ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ.

9 murder case have registered in hassan
ಹಾಸನ ಜಿಲ್ಲೆಯ ಜನರಲ್ಲಿ ಆತಂಕ

By

Published : Aug 27, 2020, 8:54 AM IST

ಹಾಸನ:ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಚನ್ನರಾಯಪಟ್ಟಣದಲ್ಲಿ ಪ್ರಾರಂಭವಾದ ಕೊಲೆಗಳ ಸರಣಿ ಈಗ ಜಿಲ್ಲೆಯಾದ್ಯಂತ ವ್ಯಾಪಿಸಿದೆ.

ಕಳೆದ ಒಂದು ತಿಂಗಳಲ್ಲಿ ಹಾಸನದಲ್ಲಿ 9ಕ್ಕೂ ಅಧಿಕ ಕೊಲೆ ಪ್ರಕರಣಗಳು ದಾಖಲಾಗಿವೆ. ಗಣೇಶ ಹಬ್ಬದಿಂದ ಹಿಡಿದು, ಮಂಗಳವಾರ ನಡೆದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಜೊತೆಗೆ ಮತ್ತೊಂದು ಪ್ರಕರಣ ದಾಖಲಾಗಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೀಡುಮಾಡಿದೆ. ಎಲ್ಲೋ ಒಂದು ಕಡೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಆತಂಕ ಕೂಡ ಎದುರಾಗಿದೆ.

ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಕೊಲೆ ಪ್ರಕರಣಗಳು

ಮಂಗಳವಾರ ಮಧ್ಯರಾತ್ರಿ ನಡೆದ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಜಿಲ್ಲೆಯಲ್ಲಿ ನಡೆದ ಮೊದಲ ಪ್ರಕರಣವಾಗಿದೆ. ದಂಡುಪಾಳ್ಯ ಗ್ಯಾಂಗ್​ನವರು ಕೊಲೆ ಮಾಡಿ ಅತ್ಯಾಚಾರ ಮಾಡುತ್ತಿದ್ದರು. ಅದೇ ರೀತಿ ಉಮೇಶ್ ರೆಡ್ಡಿ ಕೂಡ ಕೊಲೆ ಮಾಡಿ ಶವದ ಜೊತೆಯಲ್ಲಿಯೇ ಮಲಗಿ ವಿಕೃತಿ ಮರೆಯುತ್ತಿದ್ದ. ಅದೇ ರೀತಿಯಾದಂತಹ ಪ್ರಕರಣ ಮೊದಲ ಬಾರಿಗೆ ಹಾಸನದಲ್ಲಿ ನಡೆದಿದ್ದು, ಅತ್ಯಾಚಾರಕ್ಕೆ ಮೊದಲು ಆತ ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದ್ದಾನೆ. ಆದರೆ ಆಕೆ ಒಪ್ಪದಿದ್ದಾಗ ಮಧ್ಯರಾತ್ರಿ ಆಕೆ ನಿದ್ರೆಗೆ ಜಾರಿರುವುದನ್ನು ಖಚಿತಪಡಿಸಿಕೊಂಡು, ಸಿಮೆಂಟ್ ಇಟ್ಟಿಗೆಯನ್ನ ಆಕೆಯ ತಲೆ ಮೇಲೆ ಎತ್ತಿ ಹಾಕಿ, ಕೊಲೆಗೈದು ನಂತರ ಮೂರು ಬಾರಿ ಅತ್ಯಾಚಾರವೆಸಗಿ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದಾನೆ.

ಹಾಸನದ ಹೃದಯ ಭಾಗವಾದ ಎನ್.ಆರ್. ವೃತ್ತದ ಸಮೀಪವೇ ಇಂತದ್ದೊಂದು ಪ್ರಕರಣ ಜರುಗಿದೆ. ರಾತ್ರಿ 11 ಗಂಟೆ ವೇಳೆಗೆ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಿ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಂಡು ಬಳಿಕ ಠಾಣೆಗೆ ಹಿಂದಿರುಗಿದ್ದಾರೆ. ಪೊಲೀಸರು ಇಲ್ಲದ ಈ ಸಮಯವನ್ನು ನೋಡಿ ಮಧ್ಯರಾತ್ರಿ ಇಂತಹ ಕೃತ್ಯ ಎಸಗಿದ್ದಾನೆ. ಮತ್ತೆ 1 ಗಂಟೆಗೆ ಪೊಲೀಸರು ಗಸ್ತು ಬಂದ ವೇಳೆ ಯಾವುದೇ ರೀತಿಯ ಸಂಶಯ ಬಂದಿಲ್ಲ. ಮುಂಜಾನೆ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಮುಂಭಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಕಂಡು ನಾಗರಿಕರು ಬೆಚ್ಚಿಬಿದ್ದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಬ್ಯಾಂಕ್​ನಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ವಿಕೃತ ಕಾಮಿಯ ಕೃತ್ಯ ಬಯಲಾಗಿದ್ದು, ಆತನನ್ನು ಸೆರೆ ಹಿಡಿಯಲು ಈಗಾಗಲೇ ಮೂರು ತಂಡಗಳನ್ನು ರಚನೆ ಮಾಡಲಾಗಿದೆ.

ಸಂತೆಪೇಟೆಯ ಕೆಲವೊಂದು ವಾಣಿಜ್ಯ ಮಳಿಗೆಗಳಲ್ಲಿ ಕೆಲಸ ಮಾಡುವವರನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಇದಲ್ಲದೆ ನಗರದ ರೈಲ್ವೆ ನಿಲ್ದಾಣದ ಸಮೀಪ ಮಲಗುವ ನಿರ್ಗತಿಕರನ್ನು ತನಿಖೆಗೆ ಒಳಪಡಿಸಿದ್ದು, ತಾಂತ್ರಿಕ ಸಿಬ್ಬಂದಿ ಸಹಾಯದ ಮೂಲಕ ತನಿಖೆ ಮುಂದುವರೆಸಿದ್ದಾರೆ. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಪೊಲೀಸರಿಗೆ ಮಾತ್ರ ಆ ವಿಕೃತ ಕಾಮಿ ಮಾನಸಿಕ ಅಸ್ವಸ್ಥನಂತೆ ಕಂಡರೂ ಆತನ ಹಿನ್ನೆಲೆ ಏನೆಂಬುದು ಆತನನ್ನು ಬಂಧಿಸಿದ ಬಳಿಕ ಗೊತ್ತಾಗಲಿದೆ.

ಬಂಧಿಸುವ ತನಕ ನಾವು ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಇಂತದೊಂದು ಪ್ರಕರಣ ಜಿಲ್ಲೆಯಲ್ಲಿ ಆಗಬಾರದಿತ್ತು. ಆತ ದೃಶ್ಯಾವಳಿಗಳಲ್ಲಿ ಬಿಟ್ಟು ಹೋಗಿರುವ ಕೆಲವು ಸುಳಿವುಗಳ ಆಧಾರದ ಮೇಲೆ ಎರಡು ಮೂರು ದಿನಗಳಲ್ಲಿ ಆತನನ್ನು ಬಂಧಿಸುತ್ತೇವೆ ಎಂಬ ವಿಶ್ವಾಸ ಮಾತ್ರ ಪೊಲೀಸರಿಗಿದೆ.

ನಿನ್ನೆ ಕೂಡ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಅಕ್ರಮ ಸಂಬಂಧದ ಶಂಕೆಯಿಂದ ತನ್ನ ಗಂಡನನ್ನೇ ಪತ್ನಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ಹೀಗಾಗಿ ದಿನದಿಂದ ದಿನಕ್ಕೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಜನರ ಭಯವನ್ನು ದೂರ ಮಾಡಬೇಕಿದೆ.

ABOUT THE AUTHOR

...view details