ಕರ್ನಾಟಕ

karnataka

ETV Bharat / state

ಕರ್ತವ್ಯದಲ್ಲಿದ್ದ 80 ಪೊಲೀಸರಿಗೆ ಕೊರೊನಾ: ಹಾಸನ ಎಸ್​ಪಿ - ಹಾಸನ ಕೊರೊನಾ ನ್ಯೂಸ್

ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡ್ತಿರೋ ಜಿಲ್ಲೆಯ ಸುಮಾರು 80 ಮಂದಿಗೆ ಕೋವಿಡ್ ತಗುಲಿದ್ದು, 3 ಮಂದಿಗೆ ತೀವ್ರ ಸ್ವರೂಪವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹಾಸನ ಎಸ್​ಪಿ ಮಾಹಿತಿ ನೀಡಿದ್ದಾರೆ.

ಕರ್ತವ್ಯದಲ್ಲಿದ್ದ 80 ಪೊಲೀಸರಿಗೆ ಕೊರೊನಾ
ಕರ್ತವ್ಯದಲ್ಲಿದ್ದ 80 ಪೊಲೀಸರಿಗೆ ಕೊರೊನಾ

By

Published : May 5, 2021, 1:28 AM IST

ಹಾಸನ: ಜಿಲ್ಲೆಯಲ್ಲಿ ಎರಡನೇ ಕೋವಿಡ್ ಅಲೆ ಪ್ರಾರಂಭವಾಗಿದೆ. ಪ್ರತಿನಿತ್ಯ ಕೋವಿಡ್ ವಾರಿಯರ್ಸ್​ ಆಗಿ ಪೊಲೀಸ್ರು ಶ್ರಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ 60ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ ಎಂದು ಎಸ್​​ಪಿ ಆರ್.ಶ್ರೀನಿವಾಸ್ ಗೌಡ ಸ್ಪಷ್ಟಪಡಿಸಿದ್ರು.

ಪ್ರತಿನಿತ್ಯ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡ್ತಿರೋ ಜಿಲ್ಲೆಯ ಸುಮಾರು 80 ಮಂದಿಗೆ ಕೋವಿಡ್ ತಗುಲಿದ್ದು, 3 ಮಂದಿಗೆ ತೀವ್ರ ಸ್ವರೂಪವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಮ್ಮಲ್ಲಿ ನಿತ್ಯ 1,000ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಜನರು ಕೋವಿಡ್ ನಿಯಮ ಮೀರಿ ಓಡಾಡದೆ ಸಹಕರಿಸಬೇಕು ಎಂದರು.

ಇನ್ನು ನಾವು ಅಂಗಡಿ ಬಂದ್ ಮಾಡಿಸೋಕೆ ಬರುವುದು ನಿಮ್ಮ ಪ್ರಾಣಕ್ಕಾಗಿ. ನಮಗೆ ನಿಮ್ಮಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಇಲಾಖೆಯಿಂದ ಆಯೂಷ್ ಮೂಲಕ ಕೋವಿಡ್ ಕಿಟ್ ನೀಡಲಾಗುತ್ತಿದೆ. ಕೆಲವು ಕಂಪನಿಗಳು ಮಾಸ್ಕ್, ಸ್ಯಾನಿಟೈಸರ್ ನೀಡುತ್ತಿದ್ದಾರೆ. ಅವುಗಳನ್ನು ನಾವು ಉಪಯೋಗಿಸಿಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ಈಗಾಗಲೇ ಜಾರಿಗೆ ತರುತ್ತಿರುವ ರೀತಿಯಲ್ಲಿಯೇ ಹಾಸನದಲ್ಲಿಯೂ ಕೋವಿಡ್ ಸೋಂಕು ಕೈ ಮೀರಿಹೋದ್ರೆ ಏರಿಯಾ ಲಾಕ್ ಡೌನ್ ರೀತಿಯಲ್ಲಿಯೇ ಮಾಡಬೇಕಾಗುತ್ತೆ. ಜನರು ಇದಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ABOUT THE AUTHOR

...view details