ಹಾಸನ: ಮುಂದಿನ ಬಾರಿ ನಮ್ಮ ಅರಸೀಕೆರೆ ಗಣಪತಿ ಪ್ರತಿಷ್ಠಾಪನೆಗೆ ಯಾವುದೇ ವಿಘ್ನ ಎದುರಾಗದಂತೆ ಮತ್ತು ಈ ಕೊರೊನಾ ಎಂಬ ಹೆಮ್ಮಾರಿ ನಶಿಸಲಿ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ರು.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ 79ನೇ ಗಣೇಶ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಚಾಲನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ 79ನೇ ಗಣೇಶ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದ ಕ್ಷೇತ್ರದ ಗಣಪತಿಯನ್ನ 4 ತಿಂಗಳ ಹಿಂದೆಯೇ ಅರಸೀಕೆರೆಯ ದೊಡ್ಡಕೆರೆಯಲ್ಲಿ ಗಂಗೆ ಪೂಜೆ ನೆರವೇರಿಸಿ ಮೂರ್ತಿ ತಯಾರು ಮಾಡುವ ಕೆಲಸ ಶುರುಮಾಡಲಾಗಿತ್ತು. ಈ ವರ್ಷದ 79ನೇ ಗಣಪತಿ ಮಹೋತ್ಸವವನ್ನು 79 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಬೇಕಿತ್ತು. ಇಂದು ಕೊರೊನಾ ಬಂದ ಹಿನ್ನಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಗಣಪತಿ ಮಹೋತ್ಸವವನ್ನ ಆಚರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತದ ಅನುಮತಿ ಪಡೆದು ಈ ಬಾರಿ ಕೇವಲ 7 ದಿನಗಳ ಕಾಲ ಮಹೋತ್ಸವವನ್ನು ನಡೆಸುವ ಮೂಲಕ ನಿಮಜ್ಜನೆ ಮಾಡಲಾಗುತ್ತದೆ.
ಅರಸೀಕೆರೆ ಗಣಪನನ್ನ ಪ್ರತಿವರ್ಷ ಬಸವಜಯಂತಿ ದಿನದಂದು ಕೆರೆಯಲ್ಲಿ ಗಂಗೆಪೂಜೆ ಸಲ್ಲಿಸಿ ಕೆರೆಯ ಮಣ್ಣನ್ನ ತಂದು ಅರಸೀಕೆರೆಯ ಶಿಲ್ಪಿ ಗಣಪತಿ ಮಹದೇಶ್ ಕುಟುಂಬ ಸುಮಾರು 7 ದಶಕಗಳಿಂದ ತಯಾರು ಮಾಡುತ್ತಿದ್ದಾರೆ. ಈ ಬಾರಿ ಆ ಕುಟುಂಬ ಸಾವಿರಾರು ಗಣಪತಿಯನ್ನು ತಯಾರು ಮಾಡಿದ್ದು, ಕೊಳ್ಳುವವರಿಲ್ಲದೇ ಕಂಗಾಲಾಗಿದ್ದಾರೆ. ಈ ಬಾರಿಯ ಅರಸೀಕೆರೆ ಗಣಪತಿ ಮಹೋತ್ಸವಕ್ಕೆ 10.5 ಅಡಿ ಗಣಪತಿಯನ್ನ ಮಾಡಿರೋದು ವಿಶೇಷ.