ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಡೆಡ್ಲಿ ವೈರಸ್‌ಗೆ ಬಲಿಯಾದ ವ್ಯಕ್ತಿಯ ಸಂಪರ್ಕದಲ್ಲಿದ್ದ ಜನರೆಷ್ಟು? - corona infections increase

ವೃದ್ಧನ ಮಗ ಆಗಾಗ ತಮಿಳುನಾಡಿಗೆ ಹೋಗಿ ಬರುತ್ತಿದ್ದರಿಂದ ಈತನಿಗೂ ಸೋಂಕು ತಗುಲಿದೆ. ವೃದ್ಧನ ಜೊತೆಗೆ ವಾಸವಿದ್ದ 4 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಜೊತೆಗೆ ಆ ಗ್ರಾಮವನ್ನು ಕಂಟೈನ್ಮೆಂಟ್​ ಮಾಡಲಾಗಿದೆ. ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆಚ್ಚುವ ಕಾರ್ಯ ಮಾಡಲಾಗುತ್ತಿದೆ- ಜಿಲ್ಲಾಧಿಕಾರಿ

60-year-old dies in Hassan from Corona
ಸಂಗ್ರಹ ಚಿತ್ರ

By

Published : Jun 12, 2020, 5:28 PM IST

ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಮಹಾಮಾರಿ ಕೋವಿಡ್​ಗೆ 60 ವರ್ಷದ ವೃದ್ಧ ಮೊದಲ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದರು.

ವೃದ್ಧ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಬ್ರೈನ್‌ ಸ್ಟ್ರೋಕ್ ಆಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು ಸುಸ್ತು ಎಂದು ಜೂ. 10ರಂದು ಸಾಲಗಾಮೆಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅದೇ ದಿನ ರಾತ್ರಿ ಉಸಿರಾಟದ ತೊಂದರೆ ಉಂಟಾಗಿದೆ. ಅವರನ್ನು ರಾತ್ರಿ 7.30ಕ್ಕೆ ಹಿಮ್ಸ್‌ ಆಸ್ಪತ್ರೆಗೆ ಕರೆತರಲಾಗಿದೆ. ಜೂ. 11ರಂದು ವ್ಯಕ್ತಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ಪಡೆದು, ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿತ್ತು. ಜೂ. 12ರಂದು ವೃದ್ಧನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆದರೆ, ಶುಕ್ರವಾರ ಮಧ್ಯಾಹ್ನ 1.15ಕ್ಕೆ ಚಿಕಿತ್ಸೆಗೆ ಸ್ಪಂದಿಸದೆ ವೃದ್ಧ ಮೃತಪಟ್ಟಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿ

ವೃದ್ಧನ ಮಗ ಆಗಾಗ ತಮಿಳುನಾಡಿಗೆ ಹೋಗಿ ಬರುತ್ತಿದ್ದರಿಂದ ಈತನಿಗೂ ಸೋಂಕು ತಗುಲಿದೆ. ವೃದ್ಧನ ಜೊತೆಗೆ ವಾಸವಿದ್ದ 4 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಜೊತೆಗೆ ಆ ಗ್ರಾಮವನ್ನು ಕಂಟೈನ್ಮೆಂಟ್​ ಮಾಡಲಾಗಿದೆ. ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌

ಹಳೆಬೀಡಿನವವಾದ ವ್ಯಕ್ತಿ 15 ವರ್ಷಗಳ ಹಿಂದೆ ಹಾಸನಕ್ಕೆ ಬಂದು ವಾಸವಾಗಿದ್ದರು. ಕುಟುಂಬದ ಸದಸ್ಯರ ಜೊತೆಗೆ ಚರ್ಚಿಸಿ ಅಂತ್ಯಕ್ರಿಯೆ ನಡೆಸಲಾಗುವುದು. ಇನ್ನು ಅಂತ್ಯಕ್ರಿಯೆ ನಡೆಸುವ ಬಗ್ಗೆ ಪರಿಣತಿ ಹೊಂದಿರುವ ತಂಡ ಇದ್ದು, 6 ಮೀಟರ್‌ ಸ್ಥಳ ಗುರುತಿಸಿ, 8 ಅಡಿ ಗುಂಡಿ ತೆಗೆದು ಶವವನ್ನು ಮಣ್ಣು ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 9 ಪಾಸಿಟಿವ್ ಕೇಸುಗಳು ಪತ್ತೆ:

ಜಿಲ್ಲೆಯಲ್ಲಿ ಇಂದು 9 ಪಾಸಿಟಿವ್‌ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ಕೋವಿಡ್‌ ಆಸ್ಪತ್ರೆಯಿಂದ 170 ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದು, 56 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರ್‌.ಗಿರೀಶ್‌ ಹೇಳಿದರು. ಇನ್ನು ಮುಂಬೈನಿಂದ ಆಗಮಿಸಿದ್ದ ಬೇಲೂರು ತಾಲೂಕಿನ 6 ಜನರಿಗೆ ಕೋವಿಡ್‌-19 ದೃಢಪಟ್ಟಿದ್ದು ಈ ಆರು ಜನರನ್ನು ಹಾಸನದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದರು.

ಬೆಂಗಳೂರಿಗೆ ಪ್ರಯಾಣ ಮಾಡಿದ ಹಿನ್ನೆಲೆ ಸೋಂಕು ದೃಢಪಟ್ಟಿದ್ದ ಅರಕಲಗೋಡು ತಾಲೂಕಿನ ಲಾರಿ ಚಾಲಕ (ಪಿ 5479)ನ ಪ್ರಾಥಮಿಕ ಸಂಪರ್ಕದವರಾದ ಆತನ ಮಗು 10 ವರ್ಷದ (ಪಿ 223) ಹಾಗೂ ಆತನ ದೊಡ್ಡಪ್ಪ 55 ವರ್ಷದ (ಪಿ 224) ಪುರುಷನಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಐಸೊಲೇಷನ್​​ನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ವಿವರಿಸಿದರು.

ABOUT THE AUTHOR

...view details