ಕರ್ನಾಟಕ

karnataka

ETV Bharat / state

ಸಕಲೇಶಪುರ; 60 ಹಾಸಿಗೆಯ ಕೋವಿಡ್ ಕೇರ್ ಸೆಂಟರ್​ ಆರಂಭ - 60-bed Covid care center opened at Sakleshpur

ತಾಲ್ಲೂಕಿನಲ್ಲಿ ಒಟ್ಟು 60 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಮಾಡಲು ಯೋಜಿಸಲಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೆ ಪಕ್ಕದಲ್ಲೇ ಇರುವ ಮತ್ತೊಂದು ಹಾಸ್ಟೆಲ್‌ನಲ್ಲಿ 30 ಹಾಸಿಗೆಯ ಕೇಂದ್ರವನ್ನು ತೆರೆಯಲಾಗುವುದು ಎಂದು ವೈದ್ಯಾಧಿಕಾರಿ ಮಹೇಶ್ ತಿಳಿಸಿದರು.

Sakleshpur
ಸಕಲೇಶಪುರ: 60 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಆರಂಭ

By

Published : Aug 2, 2020, 12:02 AM IST

ಸಕಲೇಶಪುರ :ತಾಲ್ಲೂಕಿನ ಕೋವಿಡ್-19 ಸೋಂಕಿತರ ಆರೈಕೆಗಾಗಿ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 30 ಹಾಸಿಗೆ ಹೊಂದಿರುವ ಸುಸಜ್ಜಿತವಾದ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮಹೇಶ್ ಮಾಹಿತಿ ನೀಡಿದ್ದಾರೆ.

ಸಕಲೇಶಪುರ: 60 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಆರಂಭ

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಕಾರ್ಡ್ ಆಸ್ಪತ್ರೆಯ ಸಹಯೋಗ ಹಾಗೂ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ರವರ ಮಾರ್ಗದರ್ಶನದಲ್ಲಿ ಎಪಿಎಂಸಿ ಸಮೀಪವಿದ್ದ ಕೋವಿಡ್ ಸೆಂಟರ್ ಅನ್ನು ಈಗ ಕೋವಿಡ್ ಆರೈಕೆ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ಈ ಕೇಂದ್ರದಲ್ಲಿ ಒಟ್ಟು 30 ಹಾಸಿಗೆಗಳಿದ್ದು ಇದರಲ್ಲಿ ಲಕ್ಷಣ ರಹಿತ ಅಥವಾ ಅಲ್ಪ ಲಕ್ಷಣ ಹೊಂದಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ಈ ಕೇಂದ್ರದಲ್ಲಿ ಒಬ್ಬರು ವೈದ್ಯರು, ಶುಶ್ರೂಕಿಯರು ಹಾಗೂ ಗ್ರೂಪ್-ಡಿ ದರ್ಜೆ ನೌಕರರ ತಂಡವನ್ನು ರಚನೆ ಮಾಡಿ ಮೂರು ಪಾಳಿಯಲ್ಲೂ ಕರ್ತವ್ಯ ನಿರ್ವಹಣೆ ಮಾಡುವಂತೆ ಯೋಜಿಸಲಾಗಿದೆ. ಸೋಂಕಿತರ ಊಟ ಉಪಚಾರಕ್ಕೆ ತಹಶೀಲ್ದಾರ್ ಹಾಗೂ ಪುರಸಭಾ ಮುಖ್ಯಾಧಿಕಾರಿಗಳು ಸರ್ಕಾರದ ಸುತ್ತೋಲೆಯಲ್ಲಿರುವಂತೆ ದಿನನಿತ್ಯ ಮೆನು ಚಾರ್ಟ್‌ನಲ್ಲಿರುವಂತೆ ವಿತರಿಸಲಿದ್ದಾರೆ. ಯಾವುದೇ ರೀತಿಯ ಕೋವಿಡ್ ಲಕ್ಷಣಗಳು ಇಲ್ಲದಿದ್ದವರಿಗೂ ಸಹ 14 ದಿನಗಳವರೆಗೆ ಔಷಧೋಪಚಾರ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ನಂತರ 10 ದಿನಗಳಲ್ಲಿ ಪುನಃ ಯಾವುದೇ ಲಕ್ಷಣ ಕಂಡು ಬಾರದೆ ಇದ್ದಲ್ಲಿ ಅವರನ್ನು ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಸದ್ಯ ನೂತನ ಕೇಂದ್ರಕ್ಕೆ ಇಬ್ಬರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದಿದ್ದರಿಂದ ನಾವು ಹಾಸನ ಹಾಗೂ ಆಲೂರು ಆಸ್ಪತ್ರೆಗಳಿಗೆ ಸೋಂಕಿತರನ್ನು ಕಳುಹಿಸಿ ಕೊಡುತ್ತಿದ್ದೆವು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸದ್ಯ ತಾಲೂಕು ಆಸ್ಪತ್ರೆಯ ಜ್ವರ ತಪಾಸಣಾ ಕೇಂದ್ರದಲ್ಲಿ ತಪಾಸಣೆ ನಡೆಸಿ ಸೋಂಕಿತರು ಕಂಡುಬಂದರೆ ಅಂತವರನ್ನು ಈ ಕೇಂದ್ರಕ್ಕೆ ದಾಖಲು ಮಾಡಿಕೊಂಡು ಆರೈಕೆ ಮಾಡಲಾಗುವುದು. ಈ ಹಿಂದೆ ಈ ಕೇಂದ್ರವನ್ನು ಕೊರೊನಾ ವೈರಸ್‌ನಾ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೋವಿಡ್ ಸೆಂಟರ್ ಆಗಿತ್ತು. ಅದನ್ನೇ ಆರೈಕೆ ಕೇಂದ್ರವನ್ನಾಗಿ ಮಾರ್ಪಾಡು ಮಾಡಿದ್ದೇವೆ ಎಂದರು.

ತಾಲೂಕಿನಲ್ಲಿ ಒಟ್ಟು 60 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಮಾಡಲು ಯೋಜಿಸಲಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೆ ಪಕ್ಕದಲ್ಲೇ ಇರುವ ಮತ್ತೊಂದು ಹಾಸ್ಟೆಲ್‌ನಲ್ಲಿ 30 ಹಾಸಿಗೆಯ ಕೇಂದ್ರವನ್ನು ತೆರೆಯಲಾಗುವುದು ಎಂದು ಮಾಹಿತಿ ನೀಡಿದರು. ಸೋಂಕಿತರಿಗೆ ಚಿಕಿತ್ಸೆ ನೀಡುವ ಕೊರೊನಾ ವಾರಿಯರ್ಸ್‌ಗಳು ಹೊರಗಡೆ ಓಡದಂತೆ ಅವರಿಗಾಗಿ ಪ್ರತ್ಯೇಕವಾದ ಕೊಠಡಿಯನ್ನು ಮೀಸಲಿರಿಸಿ 24 ಗಂಟೆಯೂ ತುರ್ತು ಸೇವೆಗೆ ಅಂಬುಲೆನ್ಸ್ ಅನ್ನು ನಿಯೋಜನೆ ಮಾಡಲಾಗಿದೆ. ಸೋಂಕಿತರಲ್ಲಿ ಯಾರಿಗಾದರೂ ತುರ್ತಾಗಿ ಚಿಕಿತ್ಸೆ ಬೇಕಾದಲ್ಲಿ ಅವರನ್ನು ಹಾಸನದ ಹಿಮ್ಸ್ ಗೆ ಕಳುಹಿಸಿ ಕೊಡಲಾಗುವುದು.

ಇಂದಿನ ಕೋವಿಡ್ -19 ಸ್ಥಿತಿಗತಿ : ಕಸಬಾ ಹೋಬಳಿಯಲ್ಲಿ 05 ಕೋವಿಡ್ ಪ್ರಕರಣಗಳು ಕಂಡುಬಂದಿದ್ದು. ಬೆಳಗೋಡು ಹೋಬಳಿಯ ಸೋಂಕಿತರು ಒಬ್ಬರು ಮೃತಪಟ್ಟಿದ್ದಾರೆ. ಇದುವರೆಗೂ ತಾಲೂಕಿನಲ್ಲಿ 82 ಕೋವಿಡ್ ಪ್ರಕರಣ ಕಂಡು ಬಂದಿದ್ದು 35 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 44 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಒಟ್ಟು ಕೋವಿಡ್ ಗೆ ತಾಲೂಕಿನಲ್ಲಿ ಮೂವರು ಬಲಿಯಾಗಿದ್ದಾರೆ ಎಂದರು.

ABOUT THE AUTHOR

...view details