ಹಾಸನ :ಮೇ 23 ರಂದು ನಡೆದ ಭರತ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ನಗರದ ವಲ್ಲಬಾಯಿ ರಸ್ತೆಯಲ್ಲಿ ಗ್ಲಾಸ್ ಕಟಿಂಗ್ ಮಾಡಿಕೊಂಡಿದ್ದ ಕೋಕಿ @ ರೋಹಿತ್, ಆರ್‌ಎಂಸಿ ಯಾರ್ಡ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡ್ತಿದ್ದ ವಾಸು @ ವಸಂತ, ಹೂವಿನ ವ್ಯಾಪಾರಿ ಮಣಿ @ ಮಣಿಕಂಠ ಹೆಚ್.ಪಿ, ಹಾಸನಾಂಬ ದೇವಾಲಯದ ಸಮೀಪ ಟೈಲರ್ ಕೆಲಸ ಮಾಡುತ್ತಿದ್ದ ಜಯಂತ @ ಕ್ಯಾಟ್, ಹಾಸನ ಜಿಲ್ಲೆಯ ಶಾಂತಿಗ್ರಾಮದ ಸಮೀಪ ಬನವಾಸೆ ಗ್ರಾಮದ ಪಾನಿಪುರಿ ವ್ಯಾಪಾರಿ ಶರತ್ @ ಶರು ಹಾಗೂ ಬಂಧಿತ ಆರೋಪಿಗಳು. ಭರತ್ ಗ್ಯಾಸ್ ಏಜೆನ್ಸಿಯ ನೌಕರ ಸುದೀಪ @ ಸುಧಿ ತಲೆಮರೆಸಿಕೊಂಡಿರುವ ಆರೋಪಿ.
ಏನಿದು ಪ್ರಕರಣ ?:ಮೇ 23ರ ಮಧ್ಯಾಹ್ನ ಚಲಿಸುತ್ತಿದ್ದ ದ್ವಿಚಕ್ರ ವಾಹನ ತಡೆದು ಹಾಡಹಗಲೇ ಹೂವಿನ ವ್ಯಾಪಾರಿಯಾಗಿದ್ದ ರೌಡಿಶೀಟರ್ ಭರತ್ ಎಂಬುವನ್ನು ನಗರದ 80 ಅಡಿ ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಬಹಳ ಬರ್ಬರವಾಗಿ ಕೊಲೆಗೈದಿದ್ದರು.