ಕರ್ನಾಟಕ

karnataka

ETV Bharat / state

ಹಾಸನ: 453 ಹೊಸ ಪ್ರಕರಣಗಳು ಪತ್ತೆ, ಸೋಂಕಿತರ ಸಂಖ್ಯೆ 17,923ಕ್ಕೆ ಏರಿಕೆ - Increase in corona cases

ಹಾಸನದಲ್ಲಿ ಈವರೆಗೂ 17,923 ಪ್ರಕರಣಗಳು ದಾಖಲಾಗಿದ್ದು, 13,871 ಮಂದಿ ಗುಣಮುಖರಾಗಿದ್ದಾರೆ. 347 ಮಂದಿ ಮೃತಪಟ್ಟಿದ್ದು, 3,705 ಮಂದಿ ಕೋವಿಡ್​ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Satish, District Health and Family Welfare Officer
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್

By

Published : Oct 3, 2020, 7:49 PM IST

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದೂ ಕೂಡ ಹೊಸದಾಗಿ 453 ಪ್ರಕರಣಗಳು ವರದಿಯಾಗಿವೆ. ಈವರೆಗೂ 17,923 ಪ್ರಕರಣಗಳು ದಾಖಲಾಗಿದ್ದು, 13,871 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಹೇಳಿದರು.

ಕೊರೊನಾ ಪ್ರಕರಣಗಳ ಮಾಹಿತಿ

ಇಂದು 6 ಮಂದಿ ಮೃತಪಟ್ಟಿದ್ದು, ಅದರೊಂದಿಗೆ ಸಾವಿನ ಸಂಖ್ಯೆ 347ಕ್ಕೆ ಏರಿದೆ. 3,705 ಸಕ್ರಿಯ ಪ್ರಕರಣಗಳಿವೆ. ತೀವ್ರ ನಿಗಾ ಘಟಕದಲ್ಲಿ 50 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್

ಇಂದಿನ ತಾಲೂಕುವಾರು ಪ್ರಕರಣಗಳು: ಅರಸೀಕೆರೆಯಲ್ಲಿ 66, ಚನ್ನರಾಯಪಟ್ಟಣ 37, ಆಲೂರು 27, ಹಾಸನ 211, ಹೊಳೆನರಸೀಪುರ 28, ಅರಕಲಗೂಡು 41, ಬೇಲೂರು 32 ಹಾಗೂ ಸಕಲೇಶಪುರದಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದೆ.

ABOUT THE AUTHOR

...view details