ಕರ್ನಾಟಕ

karnataka

ETV Bharat / state

ನಕಲಿ ಅಂಗವಿಕಲ ಪ್ರಮಾಣ ಪತ್ರದಿಂದ ಹುದ್ದೆ ಪಡೆದ 42 ಮಂದಿ! - ಹಾಸನ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್ '

ಜಿಲ್ಲೆಯ 42 ಮಂದಿ ಶಿಕ್ಷಕರು ಅಂಗವಿಕಲರ ಅನುದಾನದಲ್ಲಿ ನಕಲಿ ದಾಖಲಾತಿಯನ್ನು ಪಡೆದು ಶಿಕ್ಷಕರ ಹುದ್ದೆ ಪಡೆದಿದ್ದಾರೆ ಎಂದು ಹಾಸನ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ತಿಳಿಸಿದ್ದಾರೆ.

42 people get work using fake disabled certificates
ನಕಲಿ ಅಂಗವಿಕಲ ಪ್ರಮಾಣ ಪತ್ರದಿಂದ ಹುದ್ದೆ ಪಡೆದ 42 ಮಂದಿ

By

Published : Oct 9, 2020, 2:20 PM IST

ಹಾಸನ:ಜಿಲ್ಲೆಯ 42 ಮಂದಿ ಶಿಕ್ಷಕರು ಅಂಗವಿಕಲರ ಅನುದಾನದಲ್ಲಿ ನಕಲಿ ದಾಖಲಾತಿಯನ್ನು ಪಡೆದು ಶಿಕ್ಷಕರ ಹುದ್ದೆ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಕಲಿ ಅಂಗವಿಕಲ ಪ್ರಮಾಣ ಪತ್ರದಿಂದ ಹುದ್ದೆ ಪಡೆದ 42 ಮಂದಿ

ಈ ಕುರಿತು ಪ್ರತಿಕ್ರಿಯಿಸಿರುವ ಹಾಸನ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್, ಅಂಗವಿಕಲತೆಯ ಮರು ಪರೀಕ್ಷೆಯಲ್ಲಿ ನಕಲಿ ದಾಖಲಾತಿಯ ಮೂಲಕ ಕೆಲಸ ಗಿಟ್ಟಿಸಿಕೊಂಡಿರುವುದು ದೃಢಪಟ್ಟಿದೆ. ಅಂಗವಿಕಲ ಅನುದಾನದಡಿ ಕೆಲಸ ಸಿಗಲು ಶೇ 40ರಷ್ಟು ಕಡಿಮೆ ಅಂಗವೈಕಲ್ಯತೆ ಹೊಂದಿರಬೇಕು. ಆದರೆ, ಪ್ರಕರಣದಲ್ಲಿ ಸಿಲುಕಿಕೊಂಡಿರುವ 42 ಮಂದಿ ಶಿಕ್ಷಕರು ಶೇ. 40ಕ್ಕಿಂತ ಹೆಚ್ಚಿರೋದು ಮರು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ಹುದ್ದೆ ಪಡೆದ 42 ಮಂದಿ

ಈಗಾಗಲೇ ಈ ಪ್ರಕರಣ ಲೋಕಾಯುಕ್ತದ ಮೆಟ್ಟಿಲೇರಿದ್ದು, ಪ್ರಕರಣ ತನಿಖೆಯ ಹಂತದಲ್ಲಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ABOUT THE AUTHOR

...view details