ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಇಂದು 419 ಕೊರೊನಾ ಪ್ರಕರಣ - ಹಾಸನ ಸುದ್ದಿ

ಹಾಸನ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 419 ಪ್ರಕರಣಗಳು ದಾಖಲಾಗಿವೆ.

419 Corona case in Hassan today
ಇಂದು ಹಾಸನದಲ್ಲಿ 419 ಕೊರೊನಾ ಪ್ರಕರಣ

By

Published : Sep 24, 2020, 9:44 PM IST

Updated : Sep 24, 2020, 9:49 PM IST

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಗುರುವಾರ ಹಠಾತ್ತನೆ ಏರಿದ್ದು, 419 ಪ್ರಕರಣ ದಾಖಲಾಗಿದೆ. ಅಲ್ಲದೆ ಇಂದು ಒಂದೇ ದಿನ 13 ಜನರು ಮೃತಪಟ್ಟಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಗುರುವಾರ ಬಿಡುಗಡೆಯಾದ ಅಂಕಿ ಅಂಶದಲ್ಲಿ 419 ಜನರಿಗೆ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದರೆ, ಈವರೆಗೆ 11,815 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 2583 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಹಾಸನದಲ್ಲಿ 419 ಕೊರೊನಾ ಪ್ರಕರಣ

ತೀವ್ರ ನಿಗಾ ಘಟಕದಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಸೋಂಕಿತರ ಸಂಖ್ಯೆ 14,687 ಕ್ಕೆ ಏರಿಕೆಯಾದರೆ ಮೃತರ ಸಂಖ್ಯೆ 289 ಕ್ಕೆ ತಲುಪಿದೆ ಎಂದರು.

ಗುರುವಾರ ಹಾಸನ ತಾಲ್ಲೂಕಲ್ಲಿ 6, ಅರಸೀಕೆರೆ ತಾಲ್ಲೂಕಲ್ಲಿ ನಾಲ್ವರು, ಅರಕಲಗೂಡು, ಬೇಲೂರು ಹಾಗೂ ಹೊಳೆನರಸೀಪುರ ತಾಲ್ಲೂಕುಗಳಲ್ಲಿ ತಲಾ ಒಬ್ಬರಂತೆ ಒಟ್ಟು 13ಮಂದಿ ಮೃತಪಟ್ಟಿದ್ದಾರೆ.

ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-14, ಅರಕಲಗೂಡು-70, ಅರಸೀಕೆರೆ-65, ಬೇಲೂರು-8, ಚನ್ನರಾಯಪಟ್ಟಣ-50, ಹಾಸನ-186, ಹೊಳೆನರಸೀಪುರ 7, ಸಕಲೇಶಪುರ-17 ಹಾಗೂ ಇತರೆ 2 ಸೇರಿ ಒಟ್ಟು 419 ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಕ್ಕೆ ಕೊರೋನಾ ಪ್ರಕರಣದ ಬಗ್ಗೆ ಅಂಕಿ ಅಂಶ ನೀಡಿದ್ದಾರೆ.

ಕೊರೊನಾ ದಿನೆ ದಿನೆ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ನೆಗಡಿ, ಕೆಮ್ಮು ಏನಾದರೂ ಇದ್ದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಎಲ್ಲಾರು ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ತಾಲ್ಲೂಕುವಾರು ಕೋವಿಡ್ ಪ್ರಕರಣಗಳು:
1. ಆಲೂರು - 511.
2. ಅರಕಲಗೂಡು- 1402.
3. ಅರಸೀಕೆರೆ - 1863.
4. ಬೆಲೂರು - 1039.
5. ಚನ್ನರಾಯಪಟ್ಟಣ 1988.
7. ಹಾಸನ 6187.
8. ಹೊಳೆನರಸೀಪುರ 1083.
9. ಸಕಲೇಶಪುರ 529.
10. ಇತರ 85 ಪ್ರಕರಣಗಳು

Last Updated : Sep 24, 2020, 9:49 PM IST

ABOUT THE AUTHOR

...view details