ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಮತ್ತೆ 4 ಕೊರೊನಾ ಕೇಸ್​ ಪತ್ತೆ: 144ಕ್ಕೆ ಏರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ನಿನ್ನೆ 4 ಹೊಸ ಕೊರೊನಾ ಪ್ರಕಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 144ಕ್ಕೆ ಏರಿದೆ.

4-more-corona-virus-cases-found-in-hassan
ಹಾಸನ

By

Published : May 30, 2020, 2:12 PM IST

ಹಾಸನ: ಜಿಲ್ಲೆಯಲ್ಲಿ 4 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿನ ಸೊಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 30 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 114 ಮಂದಿ‌ ಸಕ್ರಿಯ ಸೋಂಕಿತರಿದ್ದಾರೆ.

ನಿನ್ನೆ ವರದಿಯಾದ ಪ್ರಕರಣಗಳೆಲ್ಲವೂ ಆಲೂರು ತಾಲೂಕಿಗೆ ಸೇರಿದ್ದಾಗಿವೆ. ಇವರಲ್ಲಿ ಒಬ್ಬರಿಗೆ ನಿಪ್ಪಾಣಿಯಲ್ಲಿ ಸೇವೆ ಸಲ್ಲಿಸಿದ್ದ ಪೊಲೀಸರ ‌ಜೊತೆಗೆ ಸಂಪರ್ಕ ಹೊಂದಿರುವ ಕಾರಣ ಸೋಂಕು ಹರಡಿದೆ ಎನ್ನಲಾಗಿದೆ.

ಹಾಸನದಲ್ಲಿ ಮತ್ತೆ 4 ಕೊರೊನಾ ಕೇಸ್​ ಪತ್ತೆ

ಇನ್ನೊಂದು ಪ್ರಕರಣದಲ್ಲಿ ಮಂಬೈನಿಂದ ಆಗಮಿಸಿದ್ದ ತಂದೆ-ತಾಯಿಗೆ ಪಾಸಿಟಿವ್ ಬಂದರೂ ಮೊದಲ ಟೆಸ್ಟ್​ನಲ್ಲಿ ನೆಗೆಟಿವ್ ಬಂದಿದ್ದ ಮಗುವಿಗೆ ಎರಡನೇ ಟೆಸ್ಟ್​​ನಲ್ಲಿ ಪಾಸಿಟಿವ್ ವರದಿಯಾಗಿದೆ. ಮಗುವನ್ನು ಅರೈಕೆ ಮಾಡಿದ ಅಜ್ಜಿ ಹಾಗೂ ಮಾವನಿಗೂ ಸೋಂಕು ತಗುಲಿದ್ದು, ಎಲ್ಲರಿಗೂ ಕೋವಿಡ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 7,184 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 4,171 ಜನ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಶಂಕಿತರು ಹಾಗೂ 109 ಜನ ವಿದೇಶಿಯರಾಗಿದ್ದಾರೆ. ಶೀತ, ನೆಗಡಿ, ಕೆಮ್ಮು ಇರುವ 1,807 ಜನರನ್ನು ಪರೀಕ್ಷಿಸಲಾಗಿದೆ. 10 ದಿನದಿಂದ ಜ್ವರ, ಕೆಮ್ಮು, ನೆಗಡಿ ಕಂಡು ಬಂದಿರುವ 101 ಜನರನ್ನೂ ಪರೀಕ್ಷಿಸಲಾಗಿದೆ. 7,180 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದ್ದು, 590 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿರುವ ಸಮುದಾಯ ಕ್ವಾರಂಟೈನ್‍ನಲ್ಲಿ 1,180 ಜನರಿದ್ದು, 579 ಜನ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

ABOUT THE AUTHOR

...view details