ಕರ್ನಾಟಕ

karnataka

ETV Bharat / state

ಹಾಸನ ಜಿಲ್ಲೆಯಲ್ಲಿಂದು ನಾಲ್ಕು ಮಂದಿ ಕೊರೊನಾಕ್ಕೆ ಬಲಿ - ಹಾಸನದಲ್ಲಿ ಕೊರೊನಾದಿಂದ ನಾಲ್ಕು ಸಾವು

ಹಾಸನ ಜಿಲ್ಲೆಯಲ್ಲಿ ಇಂದು ಕೊರೊನಾದಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 44 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

4 dead in hassan byb corona
ಹಾಸನ ಜಿಲ್ಲೆಯಲ್ಲಿಂದು ನಾಲ್ಕು ಮಂದಿ ಕೊರೊನಾಕ್ಕೆ ಬಲಿ

By

Published : Oct 1, 2020, 4:40 PM IST

ಹಾಸನ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ನಿನ್ನೆ 451 ಪ್ರಕರಣ ದಾಖಲಾಗುವ ಮೂಲಕ ಅಚ್ಚರಿ ಮೂಡಿಸಿದ್ದ ಕೊರೊನಾ ಇವತ್ತು 372 ಪ್ರಕರಣ ದಾಖಲಿಸಿದೆ.

ಹಾಸನ ಜಿಲ್ಲೆಯಲ್ಲಿಂದು ನಾಲ್ಕು ಮಂದಿ ಕೊರೊನಾಕ್ಕೆ ಬಲಿ

ಜಿಲ್ಲೆಯಲ್ಲಿ ತಾಲೂಕುವಾರು ಕೊರೊನಾ ಪ್ರಕರಣಗಳು

ಆಲೂರು-01
ಅರಕಲಗೂಡು-28
ಅರಸೀಕೆರೆ-30
ಬೇಲೂರು-26
ಚನ್ನರಾಯಪಟ್ಟಣ-62
ಹಾಸನ-152
ಹೊಳೆನರಸೀಪುರ-48
ಸಕಲೇಶಪುರ-14

ಇತರೇ 01 ಪ್ರಕರಣ ಸೇರಿ ಇಂದು 372 ಪ್ರಕರಣಗಳು ದಾಖಲಾಗಿದೆ.

ಹಾಸನ ಜಿಲ್ಲೆಯ ಕೊರೊನಾ ವರದಿ

ಇದುವರೆಗೂ ಜಿಲ್ಲೆಯಲ್ಲಿ 17161 ಮಂದಿಗೆ ಸೋಂಕು ತಗಲಿದ್ದು, ಆಸ್ಪತ್ರೆಗಳಲ್ಲಿ 3466 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇಂದು 316 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅಲ್ಲದೆ ತೀವ್ರ ನಿಗಾ ಘಟಕದಲ್ಲಿ 44 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ನಾಲ್ಕು ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ABOUT THE AUTHOR

...view details