ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಹೊಸದಾಗಿ 320 ಮಂದಿಗೆ ಕೊರೊನಾ ಸೋಂಕು: ಮೃತರ ಸಂಖ್ಯೆ 243ಕ್ಕೆ ಏರಿಕೆ

ಹಾಸನ ಜಿಲ್ಲೆಯಲ್ಲಿ ಇಂದು 320 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 11,499ಕ್ಕೆ ಏರಿಕೆಯಾಗಿದೆ. 1 ಸಾವಿನೊಂದಿಗೆ ಮೃತರ ಸಂಖ್ಯೆ 243ಕ್ಕೆ ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

new corona cases
ಆರೋಗ್ಯಾಧಿಕಾರಿ ಸತೀಶ್

By

Published : Sep 12, 2020, 7:21 PM IST

ಹಾಸನ: ಜಿಲ್ಲೆಯಲ್ಲಿ ಇಂದು 320 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 11,499ಕ್ಕೆ ಏರಿಕೆಯಾಗಿದೆ. 1 ಸಾವಿನೊಂದಿಗೆ ಮೃತರ ಸಂಖ್ಯೆ 243ಕ್ಕೆ ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಕೋವಿಡ್​ ಮಾಹಿತಿ ನೀಡಿದ ಅವರು, ಇಂದು ಬಿಡುಗಡೆಯಾದ 324 ಜನರು ಸೇರಿ ಈವರೆಗೆ 8,485 ಮಂದಿ ಗುಣಮುಖರಾಗಿದ್ದಾರೆ. 2,771 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 53 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-20, ಅರಕಲಗೂಡು-39, ಅರಸೀಕೆರೆ-14, ಬೇಲೂರು-19, ಚನ್ನರಾಯಪಟ್ಟಣ-59, ಹಾಸನ-146, ಹೊಳೆನರಸೀಪುರ-17, ಸಕಲೇಶಪುರ-6, ಇತರೆ- 0 ಒಟ್ಟು 320 ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಆರೋಗ್ಯಾಧಿಕಾರಿ ಸತೀಶ್

ಕೊರೋನಾ ಉಲ್ಬಣವಾಗುತ್ತಿರುವ ಹಿನ್ನಲೆ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಇದ್ದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ತಾಲ್ಲೂಕುವಾರು ಈವರೆಗಿನ ಕೋವಿಡ್ ಪ್ರಕರಣಗಳು:

  • ಆಲೂರು - 397
  • ಅರಕಲಗೂಡು- 1,107
  • ಅರಸೀಕೆರೆ - 1,478
  • ಬೆಲೂರು - 861
  • ಚನ್ನರಾಯಪಟ್ಟಣ - 1,475
  • ಹಾಸನ - 4,828
  • ಹೊಳೆನರಸೀಪುರ 901
  • ಸಕಲೇಶಪುರ 381.
  • ಇತರೆ 71 ಪ್ರಕರಣಗಳು

ABOUT THE AUTHOR

...view details