ಕರ್ನಾಟಕ

karnataka

ETV Bharat / state

ಹಾಸನಕ್ಕೆ ಬಂದ 32 ಎಸ್‌ ಸಿಟಿ ಸ್ಕ್ಯಾನ್​ ಯಂತ್ರಗಳು: ಶಾಸಕ ಪ್ರೀತಮ್ ಜೆ. ಗೌಡ ಚಾಲನೆ - ನೂತನ ಸಿಟಿ ಸ್ಕ್ಯಾನ್​​​​ ಯಂತ್ರಗಳು

ಹಾಸನದಲ್ಲಿ ಮೊದಲ ಬಾರಿಗೆ 32 ಎಸ್ ಸಿಟಿ ಸ್ಕ್ಯಾನ್​ ಯಂತ್ರಗಳು ಬಂದಿದ್ದು, ಸಾರ್ವಜನಿಕರು ದೊಡ್ಡ ಶಸ್ತ್ರಚಿಕಿತ್ಸೆಗಳಿಗೆ ನಗರಕ್ಕೆ ಹೋಗಬೇಕಾಗಿಲ್ಲ ಎಂದು ಶಾಸಕ ಪ್ರೀತಮ್ ಜೆ. ಗೌಡ ಹೇಳಿದರು.

ಶಾಸಕ ಪ್ರೀತಮ್ ಜೆ. ಗೌಡ

By

Published : Aug 23, 2019, 1:18 PM IST

ಹಾಸನ:ನಗರದ ಎಸ್.ಎಸ್.ಎಮ್. ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಹೊಸ ತಂತ್ರಜ್ಞಾನದ ಸಿಟಿ ಸ್ಕ್ಯಾನ್ ಯಂತ್ರವನ್ನು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಚಾಲನೆ ನೀಡಿದರು.

ಶಾಸಕ ಪ್ರೀತಮ್ ಜೆ. ಗೌಡ ಮಾತನಾಡಿ, ಗಂಭೀರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಜನರು ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇತ್ತು. ಸರಿಯಾದ ವ್ಯವಸ್ಥೆ ಇಲ್ಲದೇ ವೈದ್ಯರು ಆಪರೇಷನ್ ಮಾಡಲು ಹಿಂದೆ ಸರಿಯುತ್ತಿದ್ದರು. ಇದನ್ನು ದೂರವಾಗಿಸುವ ನಿಟ್ಟಿನಲ್ಲಿ 32 ಎಸ್ ಸಿಟಿ ಸ್ಕ್ಯಾನ್​ ಯಂತ್ರಗಳು ಮೊದಲ ಬಾರಿಯಾಗಿ ಹಾಸನಕ್ಕೆ ಬಂದಿರುವುದು ಜನತೆಗೆ ನೆಮ್ಮದಿ ತಂದಿದೆ ಎಂದರು.

ಹಾಸನದಲ್ಲಿ ಲಗ್ಗೆಯಿಟ್ಟ 32 ಎಸ್ ಸಿಟಿ ಸ್ಕ್ಯಾನ್​ ಯಂತ್ರಗಳು

ನುರಿತ ವೈದ್ಯರು ಹಾಗೂ ತಂತ್ರಜ್ಞಾನವಿದ್ದರೂ ಕೂಡ ಸೂಕ್ತ ಉಪಕರಣಗಳಿಲ್ಲದೇ ರೋಗಿಗಳನ್ನು ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅನೇಕರು ಸಾವನ್ನಪ್ಪಿದ್ದಾರೆ. ಇಂತಹ ದುರ್ಘಟನೆಯ ಪರಿಹಾರವಾಗಿ ಎಸ್.ಎಸ್.ಎಂ. ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನನ್ನು ಲೋಕರ್ಪಣೆ ಮಾಡಿದ್ದು ಭವಿಷ್ಯದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕಲಿ ಎಂದರು.

ABOUT THE AUTHOR

...view details